ಭಾಷಣದ ವೇಳೆ ವೇದಿಕೆಯಲ್ಲಿಯೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ! - Mahanayaka

ಭಾಷಣದ ವೇಳೆ ವೇದಿಕೆಯಲ್ಲಿಯೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ!

gatkari
24/04/2024


Provided by

ನಾಗ್ಪುರ: ಮಹಾರಾಷ್ಟ್ರದ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಏಕಾಏಕಿ ಕುಸಿದು ಬಿದ್ದ ಘಟನೆ ಯಮತ್ಮಾಳ್ ನಲ್ಲಿ ನಡೆದಿದೆ.

ಯವತ್ಮಾಳ್ ಜಿಲ್ಲೆಯಲ್ಲಿ ಮೈತ್ರಿ ಪಕ್ಷ ಸಿಎಂ ಏಕನಾಥ್ ಶಿಂಧೆ ಬಣದ ಅಭ್ಯರ್ಥಿ ರಾಜಶ್ರೀ ಅವರ ಪರವಾಗಿ ಭಾಷಣ ಮಾಡುತ್ತಿದ್ದ ನಿತಿನ್ ಗಡ್ಕರಿ ಅವರು ವೇದಿಕೆಯಲ್ಲೇ ಕುಸಿಯಲು ಆರಂಭಿಸಿದ್ದರು. ಈ ವೇಳೆ ಅವರ ಭದ್ರತಾ ಸಿಬ್ಬಂದಿ, ಅವರ ನೆಲಕ್ಕೆ ಬೀಳದಂತೆ ಹಿಡಿದುಕೊಂಡಿದ್ದು, ಬಳಿಕ ಸ್ಥಳದಲ್ಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಕೆಲ ನಿಮಿಷಗಳ ಬಳಿಕ ನಿತಿನ್ ಗಡ್ಕರಿ ಚೇತರಿಸಿಕೊಂಡರು.

ಚೇತರಿಸಿಕೊಂಡ ಬಳಿಕ ವೇದಿಕೆ ಏರಿ ಗಡ್ಕರಿ ಮತ್ತೆ ಭಾಷಣ ಮುಂದುವರಿಸಿದರು. ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ನಂತರ ಮಾತನಾಡಿದ ಅವರು, ಬಿಸಿಲಿನಿಂದಾಗಿ ಈ ರೀತಿಯಾಯಿತು. ಏನಾಯಿತು ಅನ್ನೋದೇ ತಿಳಿಯಲಿಲ್ಲ, ತಲೆ ಸುತ್ತಿದ್ದರಿಂದಾಗಿ ಕುಸಿದು ಬೀಳುವಂತಾಯಿತು, ಜೊತೆಗಿದ್ದವರು ಆರೈಕೆ ಮಾಡಿದ್ದರಿಂದ ಚೇತರಿಸಿಕೊಂಡೆ ಎಂದು ಹೇಳಿದರು.

ಕೆಲ ವರ್ಷದ ಹಿಂದೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಅವರು ಇದೇ ರೀತಿ ಕುಸಿದಿದ್ದರು. ಆಗಲೂ ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗಿತ್ತು.ಚೇತರಿಸಿಕೊಂಡಿದ್ದರು. ಇದೇ ರೀತಿಯ ಘಟನೆ ಮತ್ತೆ ಈ ಬಾರಿ ನಡೆದಿದೆ.

ಹಿರಿಯ ಬಿಜೆಪಿ ನಾಯಕರಾಗಿರುವ ನಿತಿನ್ ಗಡ್ಕರಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದವರು. ನಾಗ್ಪುರ ಕ್ಷೇತ್ರದಿಂದ ಸಂಸದರಾಗಿ ಕೇಂದ್ರದಲ್ಲಿ ಹತ್ತು ವರ್ಷದಿಂದಲೂ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ