ಕೃಷಿ, ತೋಟಗಾರಿಕೆ, ವಿಜ್ಞಾನಗಳ ವಿವಿ: 10ನೇ ಅಂತರ್ ಮಹಾವಿದ್ಯಾಲಯಗಳ ಕ್ರೀಡಾ ಹಬ್ಬ - Mahanayaka

ಕೃಷಿ, ತೋಟಗಾರಿಕೆ, ವಿಜ್ಞಾನಗಳ ವಿವಿ: 10ನೇ ಅಂತರ್ ಮಹಾವಿದ್ಯಾಲಯಗಳ ಕ್ರೀಡಾ ಹಬ್ಬ

shivamogga
05/03/2024


Provided by

ಶಿವಮೊಗ್ಗ: ಹಿರಿಯೂರುನಲ್ಲಿ ಆಯೋಜಿಸಿದ್ದ 10ನೇ ಅಂತರ ಮಹಾವಿದ್ಯಾಲಯಗಳ ಬಾಸ್ಕೆಟ್‌ ಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ.ಆರ್.ಸಿ ಜಗದೀಶ್ ಉದ್ಘಾಟಿಸಿದರು.

ರಾಜ್ಯದಲ್ಲಿರುವ ವಿವಿಧ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆಗಳ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ಹಾಗೂ ಅರಣ್ಯ ಮಹಾವಿದ್ಯಾಲಯ ಪೊಣ್ಣಪೇಟೆ, ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ತೋಟಗಾರಿಕೆ ಮಹಾವಿದ್ಯಾಲಯ ಹಿರಿಯೂರು, ಕೃಷಿ ಮಹಾವಿದ್ಯಾಲಯ ನವಿಲೇ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಇರುವಕ್ಕಿ, ಎಲ್ಲಾ ಮಹಾವಿದ್ಯಾಲಯಗಳಿಂದ 2023-24 ನೇ ಸಾಲಿನ ಕ್ರೀಡಾಕೂಟ ನಡೆಯಿತು.

ಇದೇ ಸಾಲಿನ ಕ್ರೀಡಾಕೂಟದ ಒಟ್ಟಾರೆ ಶ್ರೇಷ್ಠ ಪ್ರದರ್ಶನವನ್ನು ನೀಡಿ ಚಾಂಪಿಯನ್ ಶಿಪ್ ಸಮಗ್ರ ಪ್ರಶಸ್ತಿಗಳ ಪಟ್ಟವನ್ನು ಕೃಷಿ ಮಹಾವಿದ್ಯಾಲಯ ನವಿಲೇ ಶಿವಮೊಗ್ಗ ಪಡೆದುಕೊಂಡಿದ್ದು ವಿಶೇಷವಾಗಿದೆ.

ಕ್ರೀಡಾ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಡಾ. ಶ್ರೀಧರ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಶಿವಶಂಕರ್ ಮತ್ತು ಕೃಷಿ ಮಹಾವಿದ್ಯಾಲಯದ ಆವರಣದ ಮುಖ್ಯಸ್ಥರಾದ ಡಾ. ಗಣೇಶ್ ನಾಯಕ, ತೋಟಗಾರಿಕೆ ಆವರಣದ ಮುಖ್ಯಸ್ಥರಾದ ಡಾ. ಮಂಜಪ್ಪ, ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುನಾಥ್, ಡಾ. ಯಲ್ಲಪ್ಪ ಎಂ, ಡಾ. ಈಶ್ವರ್, ಡಾ. ನಿಂಗರಾಜ್, ಡಾ. ವಿಶ್ವನಾಥ್ ಮತ್ತು ಕ್ರೀಡಾ ವಿದ್ಯಾರ್ಥಿಗಳು ಭಾಗವಹಿಸಿದರು.

ಇತ್ತೀಚಿನ ಸುದ್ದಿ