50 ರೂಪಾಯಿ ವಿಚಾರದಲ್ಲಿ ಗಲಾಟೆ: ಅಂಗಡಿಯವನ ಬೆರಳನ್ನು ಕಚ್ಚಿದ ಗ್ರಾಹಕ..!

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ಫ್ರಾಕ್ ಖರೀದಿಸುವಾಗ 50 ರೂ.ಗಳ ವಿವಾದದ ನಂತರ ವ್ಯಕ್ತಿಯೊಬ್ಬ ಅಂಗಡಿಯವನ ಬೆರಳುಗಳನ್ನು ಕಚ್ಚಿದ ವಿಚಿತ್ರ ಘಟನೆ ನಡೆದಿದೆ. ಬಟ್ಟೆ ಅಂಗಡಿಯಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕ ಶಿವಚಂದ್ರ ಕಾರ್ವಾರಿಯಾ, ಗಾಯಗೊಂಡವ್ರು. ಅವರ ಅಂಗಡಿಗೆ ಫ್ರಾಕ್ ಖರೀದಿಸಲು ಬಂದ ಗ್ರಾಹಕ ವಿಚಿತ್ರವಾಗಿ ವರ್ತಿಸಿದ್ದಾನೆ.
ಮರುದಿನ ಆ ವ್ಯಕ್ತಿ ಅಂಗಡಿಗೆ ಹಿಂದಿರುಗಿ ತಾನು ಖರೀದಿಸಿದ ಫ್ರಾಕ್ ಚಿಕ್ಕದಾಗಿದೆ ಮತ್ತು ದೊಡ್ಡ ಗಾತ್ರ ಬೇಕು ಎಂದು ಕಾರ್ವಾರಿಯಾ ಹತ್ರ ಹೇಳಿದ್ದಾನೆ. ದೊಡ್ಡ ಫ್ರಾಕ್ ಗಾಗಿ ಇನ್ನೂ ೫೦ ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಅಂಗಡಿಯವರು ಹೇಳಿದ್ದಾರೆ.
ಸ್ವಲ್ಪ ಸಮಯದ ನಂತರ, ದೊಡ್ಡ ಗಾತ್ರದ ಫ್ರಾಕ್‌ಗೆ ಪಾವತಿಸಲು ಅಗತ್ಯವಿರುವ 50 ರೂ.ಗಳ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ವಾಗ್ವಾದದ ಸಮಯದಲ್ಲಿ ಆ ವ್ಯಕ್ತಿ ಕಾರ್ವಾರಿಯಾ ಅವರ ಎಡಗೈಯ ಮೇಲಿನ ಬೆರಳನ್ನು ಕಚ್ಚಿದ್ದಾನೆ.
ಗಾಯಗೊಂಡ ಕಾರ್ವಾರಿಯಾ ಹತ್ತಿರದ ಪೊಲೀಸ್ ಠಾಣೆಗೆ ತಲುಪಿ ದೂರು ದಾಖಲಿಸಿದ್ದಾರೆ.
ಅಂಗಡಿಯವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊಟ್ವಾಲಿ ನಾರಾಯಣಿಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ ಮತ್ತು ಆತನನ್ನು ಬಂಧಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಎಚ್ಒ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth