ಉದ್ಯೋಗಕ್ಕಾಗಿ ಇನ್ಸ್ಟಾಗ್ರಾಂ ಸ್ನೇಹಿತನನ್ನು ಭೇಟಿಯಾಗಲು ಹೋದ ಮಹಿಳೆ: ಹೋಟೆಲಲ್ಲಿ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ - Mahanayaka

ಉದ್ಯೋಗಕ್ಕಾಗಿ ಇನ್ಸ್ಟಾಗ್ರಾಂ ಸ್ನೇಹಿತನನ್ನು ಭೇಟಿಯಾಗಲು ಹೋದ ಮಹಿಳೆ: ಹೋಟೆಲಲ್ಲಿ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ

17/06/2024

  1. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹೋಟೆಲ್ ವೊಂದರಲ್ಲಿ ನಿದ್ರಾಜನಕ ಬೆರೆಸಿದ ತಂಪು ಪಾನೀಯವನ್ನು ನೀಡಿದ ನಂತರ ಮಹಿಳೆಯೊಬ್ಬಳ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ನಡೆದಿದೆ.
    ಮೀರತ್ ನಿವಾಸಿಯಾಗಿರುವ ಸಂತ್ರಸ್ತೆ ತನ್ನ ದೂರಿನಲ್ಲಿ, ಬ್ಯಾಂಕಿನಲ್ಲಿ ಕೆಲಸ ಮಾಡಿಸಿ ಕೊಡುವುದಾಗಿ ಹೇಳಿಕೊಂಡ ವ್ಯಕ್ತಿಯೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿದ್ದೆ ಎಂದು ಹೇಳಿದ್ದಾರೆ. ಅವನು ಅವಳಿಗೆ ಬ್ಯಾಂಕಿನಲ್ಲಿ ಕೆಲಸ ಪಡೆಯಲು ಸಹಾಯ ಮಾಡಲು ಮುಂದಾದ ರೀತಿಯಲ್ಲಿ ನಾಟಕವಾಡಿದ್ದ.

Provided by

ಆರೋಪಿ ತನ್ನ ಸ್ನೇಹಿತನನ್ನು ಕಳುಹಿಸಿ ಕೆಲಸದ ಭರವಸೆಯ ಮೇಲೆ ತನ್ನೊಂದಿಗೆ ಡೆಹ್ರಾಡೂನ್ ಗೆ ಬರುವಂತೆ ಮಹಿಳೆಯನ್ನು ಕೇಳಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಅವನು ಅವಳನ್ನು ಅಲ್ಲಿ ಭೇಟಿ ಮಾಡಲಿಲ್ಲ. ನಂತರ, ಆ ವ್ಯಕ್ತಿಯ ಸಹಚರನು ಅವಳನ್ನು ಉತ್ತರ ಪ್ರದೇಶದ ಥಾನಭವನಕ್ಕೆ ಬರುವಂತೆ ಹೇಳಿದ್ದ. ಅಲ್ಲಿ ಅವಳು ಆರೋಪಿಯನ್ನು ಭೇಟಿಯಾಗಿದ್ದಾಳೆ.

ಆರೋಪಿಗಳು ತನಗೆ ನಿದ್ರಾಜನಕ ಬೆರೆಸಿದ ತಂಪು ಪಾನೀಯವನ್ನು ನೀಡಿದರು ಮತ್ತು ನಂತರ ಹೋಟೆಲ್ ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ