ಬೆಂಕಿ ಧಗಧಗ: ಯುಪಿ ಸಿನೆಮಾ ಹಾಲ್‌ನಲ್ಲಿ ಅಗ್ನಿ ಅವಘಡ: ರಕ್ಷಣಾ ‌ಕಾರ್ಯಾಚರಣೆ ಬಿರುಸು - Mahanayaka

ಬೆಂಕಿ ಧಗಧಗ: ಯುಪಿ ಸಿನೆಮಾ ಹಾಲ್‌ನಲ್ಲಿ ಅಗ್ನಿ ಅವಘಡ: ರಕ್ಷಣಾ ‌ಕಾರ್ಯಾಚರಣೆ ಬಿರುಸು

17/06/2024

ಉತ್ತರ ಪ್ರದೇಶದ ಶಹಜಹಾನ್‌ಪುರದ ಚಿತ್ರಮಂದಿರವೊಂದರಲ್ಲಿ ಭಾನುವಾರ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ತೀವ್ರವಾಗುತ್ತಿದ್ದಂತೆ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಹಲವಾರು ಮೀಟರ್ ವರೆಗೆ ಬೆಂಕಿ ಏರಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ.


Provided by

ಇಂಡಿಯಾ ಟುಡೇಗೆ ದೊರೆತ ದೃಶ್ಯಗಳು ಇಡೀ ಸಿನೆಮಾ ಹಾಲ್ ಅನ್ನು ಬೆಂಕಿಯು ಆವರಿಸಿರುವುದು ಕಾಣುತ್ತದೆ. ಅಲ್ಲದೇ ಕಟ್ಟಡದ ಮೇಲಿನಿಂದ ಹೊಗೆ ಹೊರಬರುತ್ತಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಂತೆ ಚಿತ್ರಮಂದಿರದ ಕುರ್ಚಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಶಹಜಹಾನ್‌ಪುರದ ಅಂಬಾ ಸಿನೆಮಾ ಹಾಲ್ ನಲ್ಲಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ತಂತಿಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ.

ಭಾನುವಾರ ಕೊನೆಯ ಪ್ರದರ್ಶನದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಸಿನೆಮಾ ಹಾಲ್ ನ್ ಭದ್ರತಾ ಸಿಬ್ಬಂದಿ ಸೋಮ್ ಪ್ರಕಾಶ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಸಿನೆಮಾ ಹಾಲ್ ಒಳಗಿನ ವಿದ್ಯುತ್ ತಂತಿಗಳಲ್ಲಿ ಭಾರಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕೊನೆಯ ಪ್ರದರ್ಶನದ ಸುಮಾರು ೩೦ ನಿಮಿಷಗಳ ನಂತರ ಸಭಾಂಗಣದ ನೌಕರರು ಹೊರಗೆ ಕುಳಿತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಮೇಲಿನಿಂದ ಜ್ವಾಲೆಗಳು ಬರುತ್ತಿರುವುದನ್ನು ನಾವು ನೋಡಿದ್ದೇವೆ ಮತ್ತು ಒಳಗೆ ಧಾವಿಸಿದಾಗ, ಎಲ್ಲವೂ ಸುಟ್ಟುಹೋಗಿರುವುದನ್ನು ನಾವು ನೋಡಿದ್ದೇವೆ” ಎಂದು ಸೋಮ್ ಪ್ರಕಾಶ್ ಹೇಳಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ