UPSC ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ನೋಡುವುದು ಹೇಗೆ?: ಇಲ್ಲಿದೆ ವಿವರ - Mahanayaka

UPSC ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ನೋಡುವುದು ಹೇಗೆ?: ಇಲ್ಲಿದೆ ವಿವರ

upsc
15/04/2024


Provided by

ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗವು 2023ರ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲು ಸಜ್ಜಾಗಿದೆ. ಯುಪಿಎಸ್‌ ಸಿ ನಾಗರಿಕ ಸೇವಾ ಪರೀಕ್ಷೆ 2023 (UPSC Civil Service Exams 2023 – UPSC CSE 2023) ಫಲಿತಾಂಶ ಶೀಘ್ರವೇ ಪ್ರಕಟವಾಗುವ ನಿರೀಕ್ಷೆ ಇದೆ. ಆದರೆ ಈವರೆಗೆ ಕೇಂದ್ರೀಯ ಲೋಕಸೇವಾ ಆಯೋಗದಿಂದ ಈ ಕುರಿತು ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ.

ಒಂದೊಮ್ಮೆ ಫಲಿತಾಂಶ ಘೋಷಣೆಯಾದರೆ, ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಫಲಿತಾಂಶ ವೀಕ್ಷಣೆಗೆ ಕೇಂದ್ರೀಯ ಲೋಕಸೇವಾ ಆಯೋಗದ ಅಧಿಕೃತ ವೆಬ್‌ ಸೈಟ್ upsc.gov.in ಅಥವಾ upsconline.nic.in ಅನ್ನು ಗಮನಿಸಬಹುದು.

ನಾಗರಿಕ ಸೇವಾ ಪರೀಕ್ಷೆ 2023ರ ಅಂತಿಮ ಫಲಿತಾಂಶ ವೀಕ್ಷಣೆಗೆ ಹೀಗೆ ಮಾಡಿ:

ಯುಪಿಎಸ್‌ ಸಿ ಸಿಎಸ್‌ ಇ 2023ರ ಅಂತಿಮ ಫಲಿತಾಂಶ ಪರಿಶೀಲಿಸುವುದಕ್ಕೆ ಇರುವ 5 ಹಂತಗಳಿವು

1) ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ ಸಿ)ದ ಅಧಿಕೃತ ವೆಬ್‌ ಸೈಟ್‌ upsc.gov.in ಗೆ ಭೇಟಿ ನೀಡಬೇಕು.

2) ಹೋಮ್‌ ಪೇಜ್‌ ನಲ್ಲಿ ವಾಟ್ಸ್‌ ನ್ಯೂ ಎಂಬ ಸೆಕ್ಷನ್‌ ಗೆ ಹೋಗಬೇಕು.

3) ಅಲ್ಲಿ “Civil Service Examinations 2023 Final Results” ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

4) ಹೊಸ ವಿಂಡೋ ಓಪನ್ ಆಗಿ, ಅದರಲ್ಲಿ ಅಂತಿಮ ಫಲಿತಾಂಶದ ವಿವರ ಇರುವ ಪಿಡಿಎಫ್‌ ತೆರೆದುಕೊಳ್ಳುತ್ತದೆ. ಅದರಲ್ಲಿ ಉತ್ತೀರ್ಣರಾದವರ ವಿವರ ಇರುತ್ತದೆ.

5) ಈ ಫಲಿತಾಂಶದ ಪಿಡಿಎಫ್‌ ಅನ್ನು ಡೌನ್‌ ಲೋಡ್ ಮಾಡಿ ಇಟ್ಟುಕೊಳ್ಳಬಹುದು. ಇದರ ಪ್ರಿಂಟ್ ಔಟ್ ಅನ್ನು ತೆಗೆದು ಇಟ್ಟುಕೊಂಡರೆ ಭವಿಷ್ಯದ ಅಗತ್ಯಗಳಿಗೆ ಬಳಸಬಹುದು.

ಎಷ್ಟು ಸಲ ಪರೀಕ್ಷೆ ಎದುರಿಸಬಹುದು?

ಇನ್ನು, ಎಸ್‌ ಸಿ/ಎಸ್‌ ಟಿ ಸಮುದಾಯದವರು ಎಷ್ಟು ಸಲ ಬೇಕಾದರೂ ಯುಪಿಎಸ್‌ ಸಿ ಸಿಎಸ್‌ ಇ ಎದುರಿಸಬಹುದು. ಉಳಿದಂತೆ ಒಬಿಸಿಯವರು 9 ಸಲ, ಅಂಗವೈಕಲ್ಯ ಹೊಂದಿರುವವರು (ಜಿಎಲ್‌/ ಇಡಬ್ಲ್ಯುಎಸ್‌/ ಒಬಿಸಿ) 9 ಸಲ, ಇತರರು 6 ಸಲ ಯುಪಿಎಸ್‌ ಸಿ ಸಿಎಸ್‌ ಇ ಎದುರಿಸಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ