ಅಮೆರಿಕದಿಂದ ಗಡೀಪಾರು: ವಲಸಿಗರನ್ನು ಕರೆದುಕೊಂಡು ಭಾರತಕ್ಕೆ ಬಂದ ವಿಮಾನ - Mahanayaka

ಅಮೆರಿಕದಿಂದ ಗಡೀಪಾರು: ವಲಸಿಗರನ್ನು ಕರೆದುಕೊಂಡು ಭಾರತಕ್ಕೆ ಬಂದ ವಿಮಾನ

06/02/2025


Provided by

ಅಮೆರಿಕ ಗಡೀಪಾರು ಮಾಡಿರುವ 104 ಭಾರತೀಯ ಅಕ್ರಮ ವಲಸಿಗರ ಪೈಕಿ 33 ಗುಜರಾತಿ ವಲಸಿಗರನ್ನು ಹೊತ್ತ ವಿಮಾನವೊಂದು ಗುರುವಾರ ಬೆಳಗ್ಗೆ ಅಮೃತಸರದಿಂದ ಅಹಮದಾಬಾದ್ ಗೆ ಬಂದಿಳಿಯಿತು. ಈ ಸಂದರ್ಭದಲ್ಲಿ ಅಕ್ರಮ ವಲಸಿಗರ ಅಭಿಪ್ರಾಯ ಪಡೆಯಲು ಮಾಧ್ಯಮದವರು ನಿರ್ಭಂದಿತರಾಗಿದ್ದು ಕಂಡು ಬಂತು.
ಗಡೀಪಾರಿಗೊಳಗಾಗಿರುವ ಗುಜರಾತ್ ನ ಬಹುತೇಕರು ಮೆಹ್ಸಾನಾ, ಗಾಂಧಿನಗರ, ಪಟನ್, ವಡೋದರ ಹಾಗೂ ಖೇಡಾ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

ಕೆಲವು ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 33 ವಲಸಿಗರು ಬಂದಿಳಿಯುತ್ತಿದ್ದಂತೆಯೆ, ಅವರನ್ನೆಲ್ಲ ಪೊಲೀಸರ ವಾಹನಗಳಲ್ಲಿ ಗುಜರಾತ್ ನ ಅವರ ಸ್ವಗ್ರಾಮಗಳಿಗೆ ಕಳಿಸಿಕೊಡಲಾಯಿತು ಎಂದು ಜಿ ವಲಯದ ಸಹಾಯಕ ಪೊಲೀಸ್ ಆಯುಕ್ತ ಆರ್.ಡಿ. ಓಝಾ ಹೇಳಿದ್ದಾರೆ.

ಮಾಧ್ಯಮ ಮಂದಿ ಗಡೀಪಾರಿಗೊಳಗಾಗಿರುವ ವಲಸಿಗರೊಂದಿಗೆ ಮಾತನಾಡಲು ಯತ್ನಿಸಿದಾಗ, ಅವರೊಂದಿಗೆ ಮಾತನಾಡಲು ನಿರಾಕರಿಸಿದ ವಲಸಿಗರು, ಪೊಲೀಸ್ ವಾಹನಗಳಲ್ಲಿ ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಿದರು ಎಂದು ವರದಿಯಾಗಿದೆ.

ಗುಜರಾತ್ ನ 33 ಅಕ್ರಮ ಭಾರತೀಯ ವಲಸಿಗರು ಸೇರಿದಂತೆ ಒಟ್ಟು 104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಸೇನಾ ವಿಮಾನವು ಬುಧವಾರ ಪಂಜಾಬ್ ನ ಅಮೃತಸರಕ್ಕೆ ಬಂದಿಳಿಯಿತು.

ನಮ್ಮ ಮಕ್ಕಳು ಹೇಗೆ ಅಮೆರಿಕಕ್ಕೆ ತೆರಳಿದರು ಎಂಬುದು ನಮಗೆ ತಿಳಿದಿಲ್ಲ ಎಂದು ಗುಜರಾತ್ ನ ಅಕ್ರಮ ವಲಸಿಗರ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ