ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ಗೆ ಕೊರೊನಾ ಸೋಂಕು - Mahanayaka

ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ಗೆ ಕೊರೊನಾ ಸೋಂಕು

06/09/2023


Provided by

ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ಗೆ ಕೊರೊನಾ ಸೋಂಕು ತಾಗಿದೆ. ಇತ್ತ ಜೋ ಬೈಡನ್‌ ವರದಿ ಕೋವಿಡ್‌ ನೆಗೆಟಿವ್‌ ಬಂದಿದ್ದು, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ವೈಟ್‌ ಹೌಸ್‌ನ ಮೂಲಗಳು ತಿಳಿಸಿವೆ. ಜೋ ಬೈಡನ್‌ ಮತ್ತು ಅವರ ಪತ್ನಿಗೆ ಈಗಾಗಲೇ ಒಂದು ಬಾರಿ ಕೊರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು.

ಜಿಲ್‌ ಬೈಡನ್‌ ರೆಹೋಬೋತ್‌ ಬೀಚ್‌ನಲ್ಲಿರುವ ಅವರ ಮನೆಯಲ್ಲಿ ಇರಲಿದ್ದು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸೆಪ್ಟೆಂಬರ್ 9ರಂದು ನವದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯಲಿದ್ದು ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಸೆ.7 ರಂದು ದೆಹಲಿಗೆ ಆಗಮಿಸಲಿದ್ದಾರೆ.

ಆದರೆ ಕೊರೊನಾ ಸೋಂಕು ಅವರ ಕುಟುಂಬದಲ್ಲೇ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜೋ ಬೈಡನ್‌ ನವದೆಹಲಿ ಭೇಟಿಯಲ್ಲಿ ಬದಲಾವಣೆ ಇರಲಿದೆಯೇ ಇಲ್ಲವೇ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಾಗಿದೆ.

ಇತ್ತೀಚಿನ ಸುದ್ದಿ