ಖಾಸಗಿ ವಾಹಿನಿ ವಿರುದ್ಧ ಆಕ್ರೋಶ: ಕಲಮಶ್ಯೇರಿ ಬಾಂಬ್ ಸ್ಫೋಟ ಪ್ರಕರಣದ ಸುದ್ದಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಫೋಟೋ ಬಳಕೆ - Mahanayaka

ಖಾಸಗಿ ವಾಹಿನಿ ವಿರುದ್ಧ ಆಕ್ರೋಶ: ಕಲಮಶ್ಯೇರಿ ಬಾಂಬ್ ಸ್ಫೋಟ ಪ್ರಕರಣದ ಸುದ್ದಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಫೋಟೋ ಬಳಕೆ

power tv
30/10/2023


Provided by

ಬೆಂಗಳೂರು: ಕೇರಳದ ಕಲಮಶ್ಯೇರಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿನ್ನೆ ಆರೋಪಿಯೋರ್ವ ಪೊಲೀಸರಿಗೆ ಶರಣಾಗಿದ್ದ, ಈ ಬಗ್ಗೆ ಕನ್ನಡದ ಖಾಸಗಿ ವಾಹಿನಿಯೊಂದು ತನ್ನ ವರದಿಯಲ್ಲಿ ಮುಸ್ಲಿಮರ ಧಾರ್ಮಿಕ ಟೋಪಿ ಧರಿಸಿದ್ದ ವ್ಯಕ್ತಿಯನ್ನು ಆರೋಪಿಯಂತೆ ಬಿಂಬಿಸಿರುವುದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿದೆ.

ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದ್ದ ಕ್ರೈಸ್ತ ಧಾರ್ಮಿಕ ಕೂಟದಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಬ್ಲಾಸ್ಟ್ ಆಗಿತ್ತು. ಘಟನೆಯಲ್ಲಿ ಇಬ್ಬರು ಅಮಾಯಕ ನಾಗರಿಕರು ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

dominic martin

ಕಲಮಶ್ಯೇರಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಡೊಮಿನಿಕ್ ಮಾರ್ಟಿನ್


ಘಟನೆಯ ಬಳಿಕ, ಕೃತ್ಯದ ಹೊಣೆ ಹೊತ್ತು ಡೊಮಿನಿಕ್ ಮಾರ್ಟಿನ್ ಎಂಬ ಆರೋಪಿ ಪೊಲೀಸರಿಗೆ ಶರಣಾಗಿದ್ದನು. ಆತ ತಾನು ಯೊಹೋವನ ಸಾಕ್ಷಿ ಸದಸ್ಯ ಎಂದು ಹೇಳಿಕೊಂಡಿದ್ದನು ಎನ್ನಲಾಗಿದೆ.

ಈ ಸುದ್ದಿಯನ್ನು ಪ್ರಕಟಿಸುವ ವೇಳೆ ಖಾಸಗಿ ಸುದ್ದಿವಾಹಿನಿ ಮುಸ್ಲಿಮ್ ವ್ಯಕ್ತಿಯೊಬ್ಬರ ಚಿತ್ರವನ್ನು ಬಳಸಿ, ಕೇರಳ ಸ್ಫೋಟ: ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟ ಮಾಡಲಾಗಿತ್ತು.

ಯಾವುದೇ ಸ್ಫೋಟಗಳಂತಹ ಚಟುವಟಿಕೆಗಳು ನಡೆದಾಗ, ಮಾಧ್ಯಮಗಳು ಮೊದಲು ಮುಸ್ಲಿಮ್ ಸಮುದಾಯವನ್ನೇ ಟಾರ್ಗೆಟ್ ಮಾಡುತ್ತಿದೆ. ಈ ರೀತಿಯ ಮನಸ್ಥಿತಿ ಯಾಕೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ