ಊಟ ಕೊಡದೇ ತಾಯಿಯ ಸಾವಿಗೆ ಕಾರಣರಾಗಿದ್ದಾರೆ | ಕೊರೊನಾದಿಂದ ಮೃತಪಟ್ಟ ಮಹಿಳೆಯ ಪುತ್ರ ಆರೋಪ - Mahanayaka
11:20 PM Friday 12 - December 2025

ಊಟ ಕೊಡದೇ ತಾಯಿಯ ಸಾವಿಗೆ ಕಾರಣರಾಗಿದ್ದಾರೆ | ಕೊರೊನಾದಿಂದ ಮೃತಪಟ್ಟ ಮಹಿಳೆಯ ಪುತ್ರ ಆರೋಪ

davanagere
28/04/2021

ದಾವಣಗೆರೆ:  ನನ್ನ ತಾಯಿಗೆ ಊಟ ಕೊಡದೇ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಕೊರೊನಾ ಸೋಂಕಿತ ಮಹಿಳೆಯ ಪುತ್ರ ಜಿಲ್ಲಾಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನ ತಾಯಿಗೆ ತಾನು ಊಟ ಕೊಡಬೇಕೇ ಎಂದು ಕೇಳಿದಾಗ ಡಾಕ್ಟರ್ ನಾವಾ? ನೀವಾ? ಎಂದು ಕೇಳಿದ್ರು. ನಮ್ಮ ತಾಯಿ ರಾತ್ರಿಯೆಲ್ಲಾ ಊಟ ಬೇಕು ಎಂದು 10 ಬಾರಿ ಕೇಳಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಕೊಟ್ಟಿಲ್ಲ ಎಂದು ಪುತ್ರ ಗಂಭೀರವಾಗಿ ಆರೋಪಿಸಿದ್ದಾರೆ.

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಲೋಕಿಕರೆ ಮೂಲದ ಮಹಿಳೆಯ ಪುತ್ರ ಈ ಗಂಭೀರವಾದ ಆರೋಪವನ್ನ ಮಾಡಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯನ್ನು ಕರೆದುಕೊಂಡು ಎರಡು ಆಸ್ಪತ್ರೆಗೆ ಸುತ್ತಿದ್ದೇವೆ. ಕೊನೆಗೆ ಅವರು ವೆಂಟಿಲೇಟರ್ ಸಿಗದೇ ಸಾವನ್ನಪ್ಪಿದ್ದಾರೆ. ತಾಯಿ ಊಟ ಕೇಳಿದರೂ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ