ಅಚ್ಚರಿ: ಉತ್ತರಪ್ರದೇಶದಲ್ಲಿ ನಾಲ್ಕು ಕೈ, ನಾಲ್ಕು ಕಾಲು ಇರುವ ಮಗುವಿನ ಜನನ..! - Mahanayaka
10:13 AM Thursday 21 - August 2025

ಅಚ್ಚರಿ: ಉತ್ತರಪ್ರದೇಶದಲ್ಲಿ ನಾಲ್ಕು ಕೈ, ನಾಲ್ಕು ಕಾಲು ಇರುವ ಮಗುವಿನ ಜನನ..!

11/11/2023


Provided by

ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ಅಚ್ಚರಿ ಘಟನೆಯೊಂದು‌ ನಡೆದಿದೆ. ನಾಲ್ಕು ಕೈ, ನಾಲ್ಕು ಕಾಲು ಇರುವ ಮಗುವಿನ ಜನನವಾಗಿದೆ. ಹೌದು. ಮೊಹಮ್ಮದ್​ ಇರ್ಫಾನ್​ (35) ರುಕ್ಸಾನಾ (30) ದಂಪತಿ ಈ ವಿಶೇಷ ಮಗುವಿಗೆ ಜನ್ಮ ನೀಡಿದ್ದಾರೆ. ಮುಜಾಫರ್‌ನಗರದಲ್ಲಿರುವ ತಮ್ಮ ಮನೆಯಲ್ಲೇ ರುಕ್ಸಾನಾ ನವಜಾತ ಶಿಶುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಉಸಿರಾಟದ ಸಮಸ್ಯೆಯಾಗಿದ್ದರಿಂದ ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ದಂಪತಿಗೆ ಈಗಾಗಲೇ 7, 4 & ಒಂದು ವರ್ಷದ ಮೂರು ಹೆಣ್ಣು ಮಕ್ಕಳಿದ್ದಾರೆ. ಮೂವರೂ ಆರೋಗ್ಯವಾಗಿದ್ದಾರೆ. ಸದ್ಯ ಈ ವಿಶೇಷ ಮಗುವನ್ನ ವೈದ್ಯರ ತಂಡ ಅನೇಕ ಪರೀಕ್ಷೆ ಒಳಪಡಿಸಿದ್ದು, ನಿಷ್ಕ್ರಿಯವಾಗಿರುವ ಹೆಚ್ಚುವರಿ ಅಂಗವನ್ನು ತೆಗೆಯುವ ಬಗ್ಗೆ ವೈದ್ಯರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಕುರಿತು ಮಾತನಾಡಿರುವ ವೈದ್ಯ ನವರತನ್​ ಗುಪ್ತಾ ‘ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲು ಬಂದಾಗ ಉಸಿರಾಟದ ತೊಂದರೆ ಮತ್ತು ಆಮ್ಲಜನಕದ ಪೂರೈಕೆ ಅಗತ್ಯವಿತ್ತು. ಸದ್ಯ ಟ್ಯೂಬ್​ ಮೂಲಕ ಆಹಾರ ನೀಡಲಾಗುತ್ತಿದೆ. ಮಗುವಿನ ಸ್ಥಿತಿ ಕೊಂಚ ಸ್ಥಿರವಾಗಿದೆ’ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ