ರಸ್ತೆ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಉತ್ತರ ಪ್ರದೇಶ ಸಾರಿಗೆ ಇಲಾಖೆಯ ಹೊಸ ಕಾರ್ಯತಂತ್ರ

ರಸ್ತೆ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಹೊಸ ಕಾರ್ಯತಂತ್ರವೊಂದನ್ನು ರೂಪಿಸಿದೆ.
ವಾಣಿಜ್ಯ ವಾಹನಗಳು ಹಾಗೂ ರಾಜ್ಯ ಸಾರಿಗೆ ಬಸ್ ಗಳ ಚಾಲಕರು ತಮ್ಮ ಕುಟುಂಬದ ಫೋಟೊವನ್ನು ಡ್ಯಾಶ್ ಬೋರ್ಡ್ ಮೇಲೆ ಇರಿಸಿಕೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತ ಚಂದ್ರ ಭೂಷಣ್ ಸಿಂಗ್ ಮನವಿ ಮಾಡಿದ್ದಾರೆ.
ಚಾಲಕರು ತಮ್ಮ ಕುಟುಂಬದ ಫೋಟೊಗಳನ್ನು ಪ್ರದರ್ಶಿಸುವ ಉಪಾಯವನ್ನು ಆಂಧ್ರಪ್ರದೇಶದಿಂದ ಆಳವಡಿಸಿಕೊಳ್ಳಲಾಗಿದೆ.
ಚಾಲಕರು ತಮ್ಮ ಮುಂದೆ ತಮ್ಮ ಕುಟುಂಬದ ಫೋಟೊ ಪ್ರದರ್ಶಿಸುವಂತೆ ಮಾಡುವ ಈ ವಿನೂತನ ಉಪಾಯವು ಚಾಲಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಭಾವನಾತ್ಮಕ ಸಂವೇದನೆಯನ್ನು ರೂಪಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಸಾರಿಗೆ ಆಯುಕ್ತರ ಪ್ರಕಾರ, ಈ ಕ್ರಮದಿಂದ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ರಸ್ತೆ ಅಪಘಾತ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಹೇಳಲಾಗಿದೆ.
2023ರಲ್ಲಿ ಶೇ. 4.7ರಷ್ಟು ರಸ್ತೆ ಅಪಘಾತಗಳು ಏರಿಕೆಯಾಗಿದ್ದು, 2022ರಲ್ಲಿ 22,596 ಇದ್ದ ಈ ಪ್ರಮಾಣವು 2023ರಲ್ಲಿ 23,652ಕ್ಕೆ ಏರಿಕೆಯಾಗಿದೆ. ಹೀಗಾಗಿ ಸಾರಿಗೆ ಇಲಾಖೆಯು ಇಂತಹ ವಿನೂತನ ಕ್ರಮದ ಮೊರೆ ಹೋಗಿದೆ ಎಂಬ ಮಾಹಿತಿ ಹಂಚಿಕೊಳ್ಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth