ಉತ್ತರ ಪ್ರದೇಶದ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ! - Mahanayaka
5:07 AM Wednesday 15 - October 2025

ಉತ್ತರ ಪ್ರದೇಶದ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ!

madrasa
13/05/2022

ಉತ್ತರ ಪ್ರದೇಶ: ಉತ್ತರಪ್ರದೇಶದ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿದೆ.  ಉತ್ತರಪ್ರದೇಶ ಮದ್ರಸಾ ಶಿಕ್ಷಣ ಮಂಡಳಿ ಈ ಆದೇಶ ಹೊರಡಿಸಿದೆ.  ಎಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿದೆ.  ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.


Provided by

ರಂಜಾನ್ ರಜೆಯ ನಂತರ ಮದರಸಾಗಳು ಪುನರಾರಂಭಗೊಳ್ಳುವ ಸಮಯದಿಂದ ಈ ಆದೇಶವನ್ನು ಪಾಲಿಸುವಂತೆ ಸೂಚಿಸಲಾಗಿದೆ.  ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು ಆದೇಶ ಪಾಲನೆಯಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.  ಇಂದಿನಿಂದ ರಂಜಾನ್ ನಂತರ ಮದರಸಾಗಳು ಪುನರಾರಂಭಗೊಳ್ಳಲಿವೆ.  ಹೀಗಾಗಿ ಇಂದಿನಿಂದಲೇ ಆದೇಶ ಜಾರಿಗೆ ಬರಲಿದೆ.

ಮದ್ರಸಾ ಶಿಕ್ಷಣ ಮಂಡಳಿ ಮೇ 9ರಂದು ಆದೇಶ ಹೊರಡಿಸಿದೆ.  ಅಲ್ಪಸಂಖ್ಯಾತರ ನಿಯಂತ್ರಣದಲ್ಲಿರುವ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಂದೆ ಕರೆನ್ಸಿ ಹಾಕಲಿಲ್ಲ ಎಂದು ಖಾಸಗಿ ಭಾಗಕ್ಕೆ ತ್ರಿಶೂಲದಿಂದ ಚುಚ್ಚಿಕೊಂಡ ಯುವಕ!

ಋಷಿ ಕುಮಾರ ಸ್ವಾಮೀಜಿಗೆ ಮಸಿ ಬಳಿದ ಕಿಡಿಗೇಡಿಗಳು!

ನೋವಲ್ಲಿ ಧೈರ್ಯ ತುಂಬುವ, ಕಷ್ಟದಲ್ಲಿ ನೆರವಾಗುವ ದಾದಿಯರಿಗೆ ನಮನ

ಈ 3 ವಿಷಯ  ಸರ್ಚ್ ಮಾಡಿದರೆ ನೀವು ಜೈಲು ಸೇರುವುದು ಗ್ಯಾರಂಟಿ!

ಕುತುಬ್ ಮಿನಾರ್ ಗೆ ವಿಷ್ಣು ಸ್ತಂಭ ಅಂತ ಹೆಸರಿಡಿ: ಮತ್ತೊಂದು ವಿವಾದ ಆರಂಭ

ಇತ್ತೀಚಿನ ಸುದ್ದಿ