ಕುತುಬ್ ಮಿನಾರ್ ಗೆ ವಿಷ್ಣು ಸ್ತಂಭ ಅಂತ ಹೆಸರಿಡಿ: ಮತ್ತೊಂದು ವಿವಾದ ಆರಂಭ - Mahanayaka

ಕುತುಬ್ ಮಿನಾರ್ ಗೆ ವಿಷ್ಣು ಸ್ತಂಭ ಅಂತ ಹೆಸರಿಡಿ: ಮತ್ತೊಂದು ವಿವಾದ ಆರಂಭ

protest
11/05/2022

ದೆಹಲಿ ;ಕುತುಬ್ ಮಿನಾರ್ ಅನ್ನು “ವಿಷ್ಣು ಸ್ತಂಬ್” ಎಂದು ಮರುನಾಮಕರಣದ ಮಾಡಿ ಎಂದು ಮಹಾಕಲ್ ಮಾನವ ಸೇನೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ನಾಮಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದು, ನಂತರ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕುತುಬ್ ಮಿನಾರ್ ಯುನೆಸ್ಕೋ ಅಂಗೀಕಾರ ಮಾಡಿದ್ದು ವಿಶ್ವ ಪರಂಪರೆಯ ತಾಣವಾಗಿದೆ.  ಕುತುಬ್ ಮಿನಾರ್ ಅನ್ನು ದೆಹಲಿ ಸುಲ್ತಾನರ ಮೊದಲ ಮೊಘಲ್ ಚಕ್ರವರ್ತಿ ಕುತುಬುದ್ದೀನ್ ಎಬಕ್ 1199 ರಲ್ಲಿ ನಿರ್ಮಿಸಿದ್ದರು. ಇದೇ ರೀತಿ, ಮೊಘಲ್ ದೊರೆಗಳ ಹೆಸರಿನ ವಿವಿಧ ಸ್ಥಳಗಳ ಹೆಸರನ್ನು ಬದಲಾಯಿಸಬೇಕೆಂದು ದೆಹಲಿ ಬಿಜೆಪಿ ಒತ್ತಾಯ ಮಾಡಿದೆ.

ಅಕ್ಬರ್ ರಸ್ತೆ, ಹುಮಾಯೂನ್ ರಸ್ತೆ ಮತ್ತು ಔರಂಗಜೇಬ್ ಲೈನ್‌ ನಂತಹ ಸ್ಥಳಗಳನ್ನು ಮರುನಾಮಕರಣ ಮಾಡಬೇಕೆಂದು ಬಿಜೆಪಿ ಕಾರ್ಯಕರ್ತರು ಮತ್ತೆ ಕಿರಿಕ್ ಆರಂಭಿಸಿದ್ದು, ಮತ್ತೊಂದು ಸುತ್ತಿನಲ್ಲಿ ವಿವಾದ ಏಳುವ ಸಾಧ್ಯತೆಗಳು ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಧ್ವನಿವರ್ಧಕ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ: ಎಷ್ಟು ಗಂಟೆವರೆಗೆ ಧ್ವನಿವರ್ಧಕ ಬಳಸಬಹುದು?

ವಿದ್ಯುತ್ ಸ್ಪರ್ಶದಿಂದ ಜೂ.ರವಿಚಂದ್ರನ್ ಸಾವು

ಮೈಸೂರು ಮೃಗಾಲಯ: ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ ತಾರಾ!

ನೇಣುಬಿಗಿದ ಸ್ಥಿತಿಯಲ್ಲಿ ಸಚಿವರ ಸೊಸೆಯ ಮೃತದೇಹ ಪತ್ತೆ

‘ದಿ ಕಾಶ್ಮೀರ್ ಫೈಲ್ಸ್’  ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ ಸಿಂಗಾಪುರ!

ಇತ್ತೀಚಿನ ಸುದ್ದಿ