ವೀರಪ್ಪನ್ ಕೊರಳಲ್ಲೂ ಇತ್ತು ಹುಲಿ ಉಗುರಿನ ಲಾಕೆಟ್: ಮೌಢ್ಯತೆನ್ನು ನಂಬುತ್ತಿದ್ದ ವೀರಪ್ಪನ್

ಚಾಮರಾಜನಗರ: ಕಾಡುಗಳ್ಳ, ದಂತಚೋರ, ನರಹಂತಕ ವೀರಪ್ಪನ್ ಕೊರಳಲ್ಲೂ ಕೂಡ ಬರೋಬ್ಬರಿ 25 ವರ್ಷಗಳ ತನಕ ಹುಲಿ ಉಗುರಿನ ಲಾಕೆಟ್ ವೊಂದು ನೇತಾಡುತ್ತಿತ್ತು.
ಹೌದು…, ಕಾಡುಗಳ್ಳನ ಫೋಟೋಗಳನ್ನು ಸೆರೆಹಿಡಿದ ತಮಿಳುನಾಡಿನ ಪತ್ರಕರ್ತ ಶಿವಸುಬ್ರಹ್ಮಣ್ಣ ಈ ಸಂಬಂಧ ಮಾಹಿತಿ ನೀಡಿದ್ದು, ವೀರಪ್ಪನ್ ಕೊರಳಲ್ಲಿ ಯಾವಾಗಲೂ ಹುಲಿ ಉಗುರಿನ ಲಾಕೆಟ್ ಇರುತ್ತಿತ್ತು, ಬಂಡೀಪುರದಲ್ಲೆಲ್ಲೋ ಸತ್ತು ಬಿದ್ದಿದ್ದ ಹುಲಿಯೊಂದರ ಉಗುರುಗಳನ್ನು ಆತ ಕಿತ್ತಕೊಂಡು ಬಂದು ತಾನೆರಡು ಇಟ್ಟುಕೊಂಡು, ಸ್ನೇಹಿತರಿಗೆ ಕೊಟ್ಟಿದ್ದ. ಉಳಿದಿದ್ದ ಎರಡು ಉಗುರುಗಳಲ್ಲಿ ಸಾವಿರ ರೂ.ನಲ್ಲಿ 1 ತೊಲ ಬಂಗಾರದಲ್ಲಿ ಸರ ಮಾಡಿಸಿಕೊಂಡು ಹಾಕಿಕೊಂಡಿದ್ದ ಎಂದು ವೀರಪ್ಪನ್ ಸಂದರ್ಶನ ಸಮಯದಲ್ಲಿ ತಿಳಿಸಿದ್ದ ಎಂದು ಹೇಳಿದ್ದಾರೆ.
ಆನೆಗಳು, ಗಂಧದನ್ನು ಲೂಟಿ ಮಾಡುತ್ತಿದ್ದ ಆತ ಹುಲಿಯನ್ನು ತಾನು ಕೊಂದಿಲ್ಲ ಎಂದು ಹೇಳಿಕೊಂಡಿದ್ದ, ಆತನ ಸಹಚರ ಸೇತುಕುಳಿ ಗೋವಿಂದನ್ ಎದುರಾದ ಹುಲಿಗೆ ಗುಂಡು ಹಾರಿಸಿದ್ದ ಎಂದು ಆತ ತಿಳಿಸಿದ್ದ ಎಂದು ಮಾಹಿತಿ ಕೊಟ್ಟಿದ್ದಾರೆ.
ಸಾಯುವ ತನಕವೂ ಕೂಡ ಹುಲಿ ಉಗುರಿನ ಲಾಕೆಟ್ ಆತನ ಕೊರಳಲ್ಲಿ ನೇತಾಡುತ್ತಿದ್ದು ದೇವರು ಹಾಗೇ ಮೌಢ್ಯತೆಯನ್ನು ನಂಬುತ್ತಿದ್ದ ಆತ ಹುಲಿ ಉಗುರಿನ ಧರಿಸಿದ್ದ ಎನ್ನಲಾಗುತ್ತಿದೆ.