BreakingNews: ವೀರಪ್ಪನ್ ನ ಮುಖ್ಯ ಸಹಚರ ಜ್ಞಾನಪ್ರಕಾಶ್ ಜಾಮೀನಿನ ಮೂಲಕ ಬಿಡುಗಡೆ - Mahanayaka

BreakingNews: ವೀರಪ್ಪನ್ ನ ಮುಖ್ಯ ಸಹಚರ ಜ್ಞಾನಪ್ರಕಾಶ್ ಜಾಮೀನಿನ ಮೂಲಕ ಬಿಡುಗಡೆ

jnanaprakash
20/12/2022

ಚಾಮರಾಜನಗರ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಇಂದು ಬೆಳಗ್ಗೆ ಮೈಸೂರಿನ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಜ್ಞಾನಪ್ರಕಾಶ್(68) ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿಯಾಗಿದ್ದು, ಕಾಡುಗಳ್ಳನ ಮುಖ್ಯ ಸಹಚರಾರಾಗಿದ್ದರು‌. ಭಯಾನಕ ಎನಿಸುವ “ಪಾಲಾರ್  ಬಾಂಬ್  ಸ್ಫೋಟ” ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಜ್ಞಾನಪ್ರಕಾಶ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ‌ಬಳಿಕ, ಸುಪ್ರೀಂ ಕೋರ್ಟ್ 2014 ರಲ್ಲಿ ಗಲ್ಲು ಶಿಕ್ಷೆ ಬದಲಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

68 ವರ್ಷದ ಜ್ಞಾನಪ್ರಕಾಶ್ 29 ವರ್ಷಗಳಿಂದ ಜೈಲಿನಲ್ಲೇ ಇದ್ದು ಮೂರು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ಅವರನ್ನು ಬಾಧಿಸುತ್ತಿದೆ. ಮಾನವೀಯತೆ ಆಧಾರದಲ್ಲಿ ಸುಪ್ರೀಂ ಜಾಮೀನು ಮಂಜೂರು ಮಾಡಿದ್ದರಿಂದ ಚಾಮರಾಜನಗರ ನ್ಯಾಯಾಲಯವು ಇಬ್ಬರಿಂದ ಶೂರಿಟಿ ಪಡೆದು ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಇಂದು ಬೆಳಗ್ಗೆ ಜಾಮೀನಿನಿಂದ ಜ್ಞಾನಪ್ರಕಾಶ್ ಬಿಡುಗಡೆಯಾಗಿದ್ದು ಕುಟುಂಬವನ್ನು ಸೇರಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ