ಮೊದಲ ಬಾರಿಗೆ ವೀರೇಂದ್ರ ಹೆಗಡೆ ಪ್ರತಿಕ್ರಿಯೆ: ಧರ್ಮಸ್ಥಳ ಪ್ರಕರಣದ ಬಗ್ಗೆ ಹೇಳಿದ್ದೇನು? - Mahanayaka

ಮೊದಲ ಬಾರಿಗೆ ವೀರೇಂದ್ರ ಹೆಗಡೆ ಪ್ರತಿಕ್ರಿಯೆ: ಧರ್ಮಸ್ಥಳ ಪ್ರಕರಣದ ಬಗ್ಗೆ ಹೇಳಿದ್ದೇನು?

veerendra heggade
19/08/2025


Provided by

ಬೆಂಗಳೂರು: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಸಾಮೂಹಿಕವಾಗಿ ಹೂತು ಹಾಕಿರುವ  ಆರೋಪಗಳಿಗೆ ಸಂಬಂಧಿಸಿದಂತೆ  ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸಂಸದ ವೀರೇಂದ್ರ ಹೆಗಡೆ(Veerendra Heggade) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

PTIಗೆ ನೀಡಿರುವ ಸಂದರ್ಶನದಲ್ಲಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಈ ಆರೋಪಗಳು ಆಧಾರ ರಹಿತ ಮತ್ತು ಸುಳ್ಳು ಎಂದು ಹೇಳಿದರು.

ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಆರೋಪ ಮಾಡಲಾಗಿದೆ ಎಂದು ಅವರು ಆರೋಪಿಸಿದರಲ್ಲದೇ, ಕರ್ನಾಟಕ ಸರ್ಕಾರ ರಚಿಸಿರುವ ಎಸ್ ಐಟಿಯನ್ನು ಸ್ವಾಗತಿಸುವುದಾಗಿ ತಿಳಿಸಿದರು.

ಎಸ್ ಐಟಿ ರಚಿಸಿರುವುದು ಒಳ್ಳೆಯದಾಗಿದೆ, ಎಲ್ಲರಿಗೂ ಸತ್ಯ ತಿಳಿಯಲು ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಲಿ. ನಮ್ಮ ಎಲ್ಲ ದಾಖಲೆಗಳನ್ನು ತೆರೆದಿಟ್ಟಿದ್ದೇವೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.

ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ, ಎಲ್ಲ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳು ಟ್ರಸ್ಟ್ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ಕುಟುಂಬದ ಒಡೆತನದ ಆಸ್ತಿ ಬಹಳ ಕಡಿಮೆಯಿದೆ. ಹೆಚ್ಚಿನ ಆಸ್ತಿ ಟ್ರಸ್ಟ್ ನದ್ದಾಗಿದೆ ಮತ್ತು ಅದಕ್ಕೆ ದಾಖಲೆಗಳಿವೆ ಎಂದು ಅವರು ತಿಳಿಸಿದರು.

ಇನ್ನೂ ಧರ್ಮಸ್ಥಳದಲ್ಲಿ ಶವ ಹೂತು ಹಾಕಲಾಗಿದೆ ಎಂಬ ಆರೋಪಗಳು ಸುಳ್ಳು, ಧರ್ಮಸ್ಥದಲ್ಲಿ ನಿಧನ ಹೊಂದಿದವರು ಮೋಕ್ಷ ಪಡೆಯುತ್ತಾರೆ ಎಂಬ ಜನಪ್ರಿಯ ನಂಬಿಕೆ ಇದೆ. ಯಾರೇ ಮೃತಪಟ್ಟರೂ ಪಂಚಾಯತ್ ಗೆ ತಿಳಿಸಿ ಕಾನೂನಿನಂತೆಯೇ ಮುಂದಿನ ಕಾರ್ಯ ನಡೆಸಿದ್ದೇವೆ ಎಂದ ಅವರು, ಈಗ ಪ್ರಚಾರದಲ್ಲಿರುವ ಆರೋಪಗಳು ಕಟ್ಟುಕಥೆಗಳು ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ