ವಿಡಿಯೋ ಕಾಲ್ ನಲ್ಲಿ ಪತ್ನಿಯನ್ನು ತೋರಿಸಲು ಒಪ್ಪದ ಸ್ನೇಹಿತನ ಬರ್ಬರ ಹತ್ಯೆ! - Mahanayaka

ವಿಡಿಯೋ ಕಾಲ್ ನಲ್ಲಿ ಪತ್ನಿಯನ್ನು ತೋರಿಸಲು ಒಪ್ಪದ ಸ್ನೇಹಿತನ ಬರ್ಬರ ಹತ್ಯೆ!

police
02/02/2023

ಬೆಂಗಳೂರು: ವಿಡಿಯೋ ಕಾಲ್ ನಲ್ಲಿ ಪತ್ನಿಯನ್ನು ತೋರಿಸಲಿಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಸ್ನೇಹಿತನೇ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ.

ರಾಜೇಶ್ ಮಿಶ್ರಾ ಎಂಬವರು ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸುರೇಶ್ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ. ರಾಜೇಶ್ ಹಾಗೂ ಸುರೇಶ್ ಎಚ್ ಎಸ್ ಆರ್ ಲೇಔಟ್ ನ ಜವಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ರಾಜೇಶ್ ಮಿಶ್ರಾ ತನ್ನ ಪತ್ನಿಯ ಜೊತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಸುರೇಶ್, ನಿನ್ನ ಪತ್ನಿಯನ್ನು ನೋಡಬೇಕು ಆಕೆಗೆ ವಿಡಿಯೋ ಕಾಲ್ ಮಾಡು ಎಂದು ಹೇಳಿದ್ದಾನೆ. ಈ ವೇಳೆ ನನ್ನ ಪತ್ನಿಯನ್ನು ನೀನೇಕೆ ನೋಡಬೇಕು ಎಂದು ರಾಜೇಶ್ ಮಿಶ್ರಾ ಪ್ರಶ್ನಿಸಿದ್ದಾನೆ.

ಆದರೆ ಪಟ್ಟ ಬಿಡದ ಸುರೇಶ್ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜೇಶ್ ಮಿಶ್ರಾ ಜೊತೆಗೆ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ರಾಜೇಶ್ ನ ಹೊಟ್ಟೆಗೆ ಸುರೇಶ್ ಕತ್ತರಿಯಿಂದ ಚುಚ್ಚಿದ್ದು, ಪರಿಣಾಮವಾಗಿ ರಾಜೇಶ್  ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡಿದ್ದ ರಾಜೇಶ್ ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಆರೋಪಿ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ