ಕೀರ್ತಿ ಸುರೇಶ್ ಫೋಟೋ ನೋಡಿ ಮರುಳಾದ: ವಂಚಕಿಯ ಬಲೆಗೆ ಬಿದ್ದು 40 ಲಕ್ಷ ರೂ. ಕಳೆದುಕೊಂಡ! - Mahanayaka
3:28 PM Saturday 14 - December 2024

ಕೀರ್ತಿ ಸುರೇಶ್ ಫೋಟೋ ನೋಡಿ ಮರುಳಾದ: ವಂಚಕಿಯ ಬಲೆಗೆ ಬಿದ್ದು 40 ಲಕ್ಷ ರೂ. ಕಳೆದುಕೊಂಡ!

vijayapura crime news
02/12/2022

ವಿಜಯಪುರ: ತಮಿಳಿನ ಖ್ಯಾತ ನಟಿಯ ಫೋಟೋ ಬಳಸಿ ಯುವಕನೊಂದಿಗೆ ಮಹಿಳೆಯೊಬ್ಬರು ಚಾಟ್ ಮಾಡಿ ಆತನಿಂದ ಸುಮಾರು 40 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಪರಶುರಾಮ ಎಂಬಾತ ವಂಚನೆಗೊಳಗಾದ ಯುವಕನಾಗಿದ್ದು, ಈತ ಹೈದ್ರಾಬಾದ್ ನಲ್ಲಿ ಕಟ್ಟಡ ಕಾರ್ಮಿಕ ಸೂಪರ್ ವೈಸರ್ ಆಗಿದ್ದ. ತಿಂಗಳಿಗೆ ಸುಮಾರು 30 ಸಾವಿರ ರೂ. ದುಡಿಯುತ್ತಿದ್ದ ಎನ್ನಲಾಗಿದೆ.

ತಮಿಳುನಟಿ ಕೀರ್ತಿ ಸುರೇಶ್ ಅವರ ಪ್ರೊಫೈಲ್ ಫೋಟೋ ಹಾಕಿದ್ದ ಫೇಸ್ ಬುಕ್ ಖಾತೆಯಲ್ಲಿ ವಂಚಕಿ ಮಹಿಳೆ  ಪರಶುರಾಮನ ಜೊತೆಗೆ ಚಾಟ್ ಮಾಡುತ್ತಿದ್ದು, ಕೀರ್ತಿ ಸುರೇಶ್ ಪರಿಚಯವಿಲ್ಲ ಯುವಕ ನಿಜವಾಗಿಯೂ ಸುಂದರ ಯುವತಿ ಬುಟ್ಟಿಗೆ ಬಿದ್ದು ಬಿಟ್ಟಿದ್ದಾಳೆ ಎಂದು ಕೊಂಡಿದ್ದು, ಚಾಟ್ ಮಾಡುತ್ತಾ, ಮದುವೆ ಆಗೋವರೆಗೂ ಗಾಢವಾಗಿ ಯುವಕ ಪ್ರೀತಿಸಿದ್ದ.

ತಾನು ಕೇಂದ್ರ ಸರ್ಕಾರದ ಪರೀಕ್ಷೆಗೆ ಸಿದ್ಧವಾಗುತ್ತಿರುವುದಾಗಿ ಪರಶುರಾಮವನ್ನು ಮಹಿಳೆ ನಂಬಿಸಿದ್ದಳು. ಸುಂದರ ಯುವತಿ, ಡಿಸಿಯೂ ಆಗಿರುವ ಪತ್ನಿ ಸಿಗುತ್ತಾಳೆನ್ನುವ  ನಿರೀಕ್ಷೆಯಲ್ಲಿದ್ದ ಪರಶುರಾಮನ ಭಾವನೆಗಳನ್ನು ಬಳಸಿಕೊಂಡ ಮಹಿಳೆ ಆತಗೆ ಬರೋಬ್ಬರಿ 40 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾಳೆ.

5 ಲಕ್ಷ ಹಣ, ಒಂದು ಫ್ಲಾಟ್ ಸೇರಿದಂತೆ ಆಕೆಯ ಓದಿಗಾಗಿ ಎಲ್ಲವನ್ನೂ ಮಾರಾಟ ಮಾಡಿ ಯುವಕ ಹಣ ಕಳುಹಿಸುತ್ತಿದ್ದ. ಆದರೆ, ಆಕೆ ಭೇಟಿಯಾಗಿರಲಿಲ್ಲ. ಕೊನೆಗೆ ಆತ ಸ್ನಾನ ಮಾಡುವ ವೇಳೆ ವಿಡಿಯೋ ಕಾಲ್ ಮಾಡಿದ್ದ ಈಕೆ, ವಿಡಿಯೋ ಕಾಲ್ ನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಬಳಿಕ ಈ ವಿಡಿಯೋವನ್ನು ಬಳಸಿಕೊಂಡು ಯುವಕನನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಳು. ಇದರಿಂದ ರೋಸಿ ಹೋದ ಯುವಕ ಬೇಸತ್ತು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾನೆ.

ಹಾಸನ ಮೂಲದ ಮಹಿಳೆಯಾಗಿರುವ ಈಕೆಯ ಹೆಸರು ಮಂಜುಳಾ ಎಂದು ತಿಳಿದು ಬಂದಿದೆ. ಈಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಗ್ರಾಮದವಳಾಗಿದ್ದಾಳೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ.ಆನಂದ್ ಕುಮಾರ್ ನೇತೃತ್ವದ ತಂಡ ಆರೋಪಿ ಮಂಜುಳನನ್ನು ಬಂಧಿಸಿದ್ದಾರೆ. ಮಂಜುಳಾ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ಪತಿ ಪರಾರಿಯಾಗಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ