ನಾನು ಕೂಡ ಅವಳ ಜೊತೆಗೆ ಸತ್ತೆ: ಮಗಳ ಸಾವಿನ ಬಳಿ ವಿಜಯ್ ಮೊದಲ ಪ್ರತಿಕ್ರಿಯೆ - Mahanayaka
8:30 AM Sunday 15 - September 2024

ನಾನು ಕೂಡ ಅವಳ ಜೊತೆಗೆ ಸತ್ತೆ: ಮಗಳ ಸಾವಿನ ಬಳಿ ವಿಜಯ್ ಮೊದಲ ಪ್ರತಿಕ್ರಿಯೆ

vejay antoney
22/09/2023

ಚೆನ್ನೈ: ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಖ್ಯಾತ ನಟ, ಸಂಗೀತ ಸಂಯೋಜಕ ವಿಜಯ್ ಆಂಟನಿ ಇತ್ತೀಚೆಗೆ ತಮ್ಮ ಕಿರಿಯ ಮಗಳು ಮೀರಾಳನ್ನು ಕಳೆದುಕೊಂಡಿದ್ದರು. ಸದ್ಯ ಶೋಕ ಸಾಗರದಲ್ಲಿ ಮುಳುಗಿರುವ ಅವರು, ಮೊದಲ ಬಾರಿಗೆ ತನ್ನ ನೋವನ್ನು ತೋಡಿಕೊಂಡಿದ್ದಾರೆ.

ವಿಜಯ್ ಆ್ಯಂಟಿನಿ ತಂದೆ ವಿಜಯ್ ಸಣ್ಣ ವಯಸ್ಸಿನಲ್ಲಿರುವಾಗಲೇ ಆತ್ಮಹತ್ಯೆಗೆ ಶರಣಾಗಿದ್ದರು, ಆ ಬಳಿಕ ಅವರು ಆತ್ಮಹತ್ಯೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದ್ದರು. ಆದ್ರೆ, ಅನಿರೀಕ್ಷಿತವಾಗಿ ಅವರ ಮಗಳು ಮೀರಾ ಕೂಡ ಆತ್ಮಹತ್ಯೆಗೆ ಶರಣಾಗಿರೋದು ಅವರನ್ನು ಇನ್ನಿಲ್ಲದೇ ದುಃಖಕ್ಕೆ ದೂಡಿದೆ.

ಕಳೆದ ರಾತ್ರಿ ವಿಜಯ್ ಆ್ಯಂಟನಿ ಟ್ವಿಟ್ಟರ್ ನಲ್ಲಿ ಮಗಳ ಬಗ್ಗೆ ಭಾವುಕ ನುಡಿಗಳನ್ನಾಡಿದ್ದಾರೆ. ನೋವು ದುರುದ್ದೇಶಗಳಿಲ್ಲದ ಉತ್ತಮ ಜಾಗದಲ್ಲಿ ನನ್ನ ಮಗಳಿದ್ದಾಳೆ. ಅವಳು ಧೈರ್ಯಶಾಲಿ, ನನ್ನೊಂದಿಗೆ ಮಾತನಾಡುತ್ತಿದ್ದಾಳೆ. ನಾನು ಕೂಡ ಅವಳ ಜೊತೆಗೆ ಸತ್ತೆ. ಅವಳೊಂದಿಗೆ ಕಳೆಯಲು ಆರಂಭಿಸಿದ್ದೇನೆ. ನಾನು ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳನ್ನು ಅವಳು ಪ್ರಾರಂಭಿಸುತ್ತಾಳೆ ಎಂದು ದುಃಖದಲ್ಲಿ ಬರೆದುಕೊಂಡಿದ್ದಾರೆ.


Provided by

ಶೈಕ್ಷಣಿಕ ಒತ್ತಡದಿಂದಾಗಿ ವಿಜಯ್ ಆ್ಯಂಟನಿ ಅವರ 16 ವರ್ಷದ ಪುತ್ರಿ ತಮ್ಮ ಜೀವನವನ್ನು ಕೊನೆಗಾಣಿಸಿದ್ದಳು. ಈ ಸಾವಿನ ಬಳಿಕ ಮೊದಲ ಬಾರಿಗೆ ವಿಜಯ್ ಆ್ಯಂಟನಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ