ವಿಕ್ರಾಂತ್ ರೋಣ ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭ:  ಟಿಕೆಟ್ ಖರೀದಿಗೆ ಮುಗಿ ಬಿದ್ದ ಸಿನಿಪ್ರಿಯರು - Mahanayaka
11:51 AM Saturday 31 - January 2026

ವಿಕ್ರಾಂತ್ ರೋಣ ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭ:  ಟಿಕೆಟ್ ಖರೀದಿಗೆ ಮುಗಿ ಬಿದ್ದ ಸಿನಿಪ್ರಿಯರು

vikranth rona
24/07/2022

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಚಿತ್ರದ ಟಿಕೆಟ್ ಬುಕ್ಕಿಂಗ್ ಭಾನುವಾರದಿಂದ ಆರಂಭವಾಗಿದ್ದು, ಮೊದಲನೇ ದಿನವೇ ಚಿತ್ರ ವೀಕ್ಷಿಸಬೇಕು ಎಂದು ಕಾದು ಕುಳಿತಿರುವವರು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.

ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದು, ತಾವು ಟಿಕೆಟ್ ಖರೀದಿಸಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಕಿಚ್ಚ ಸುದೀಪ್ ಅವರ ಪ್ರತಿ ಚಿತ್ರವೂ ವಿಶೇಷತೆಯಿಂದ ಕೂಡಿರುತ್ತದೆ. ಚಿತ್ರದ ಕಥೆ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಗುತ್ತು ಗಾಂಭಿರ್ಯಕ್ಕೆ ತಕ್ಕುದಾದ ಕಥೆಯನ್ನು ನಿರ್ದೇಶಕ ನಿರ್ದೇಶಕ ಅನೂಪ್​ ಭಂಡಾರಿ ಹೇಗೆ ಹೇಳಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ರಂಗಿತರಂಗ ಚಿತ್ರದ ಭರ್ಜರಿ ಯಶಸ್ಸಿನ ನಂತರ ಇದೀಗ ವಿಕ್ರಾಂತ್ ರೋಣವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ಜೊತೆಗೆ ರಂಗಿತರಂಗ ಚಿತ್ರದ ನಾಯಕ ನಟ ನಿರೂಪ್ ಭಂಡಾರಿ ಕೂಡ ಚಿತ್ರದಲ್ಲಿದ್ದು, ಪ್ರಬುದ್ಧ ನಟರ ಸಂಗಮದಲ್ಲಿ ವಿಕ್ರಾಂತ್ ರೋಣ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಸಿನಿ ಪ್ರಿಯರ ಎದೆಯಲ್ಲಿಅಡಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ