ತನ್ನ ವಿರುದ್ಧ ಷಡ್ಯಂತ್ರ ನಡೆಯ ಬಹುದು ಅಂತ ಮೊದಲೇ ಸಂಶಯಪಟ್ಟೊದ್ರಂತೆ ವಿನೇಶ್ ಫೋಗಟ್!

ನವದೆಹಲಿ: ಪ್ಯಾರಿಸ್ ಒಲಿಪಿಂಕ್ಸ್ ಕುಸ್ತಿ ವಿಭಾಗದಲ್ಲಿ ಫೈನಲ್ ವರೆಗೆ ಬಂದು ತೂಕ ಹೆಚ್ಚಳದ ಕಾರಣಕ್ಕೆ ಅನರ್ಹಗೊಂಡ ವಿನೇಶ್ ಫೋಗಟ್ ಈ ಹಿಂದೆಯೇ ತನ್ನ ವಿರುದ್ಧ ಷಡ್ಯಂತ್ರ ನಡೆಯಬಹುದು ಎಂದು ಅನುಮಾನಿಸಿದ್ರಂತೆ!
ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ವೇಳೆ ವಿನೇಶ್ ಫೋಗಟ್ ದ್ವೇಷ ಕಟ್ಟಿಕೊಂಡಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಒಂದು ವೇಳೆ ನಾನು ಒಲಿಂಪಿಕ್ಸ್ ನಲ್ಲಿ ನನ್ನ ಆಯ್ಕೆಯಾಗದಂತೆ ಅಥವಾ ಆಯ್ಕೆಯಾದರೆ ಪಂದ್ಯದ ಸಂದರ್ಭದಲ್ಲಿ ತಾನು ಕುಡಿಯುವ ನೀರಿಗೆ, ಆಹಾರಕ್ಕೆ ಏನಾದರೂ ಮಿಕ್ಸ್ ಮಾಡಿ ಅನರ್ಹಗೊಳ್ಳುವಂತೆ ಮಾಡಿದರೆ ಏನು ಮಾಡೋದು ಎಂದು ಪ್ರಶ್ನಿಸಿದ್ರಂತೆ!
ವಿನೇಶ್ ಗೆದ್ದಾಗ ಹಲವರು ಬ್ರಿಜ್ ಭೂಷಣ್ ಆಂಡ್ ಗ್ಯಾಂಗ್ ಗೆ ತಕ್ಕ ಶಾಸ್ತಿಯಾಗಿದೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಫೈನಲ್ ನಲ್ಲಿ ತೂಕ ಹೆಚ್ಚಳದ ಕಾರಣ ನೀಡಿ ಅವರನ್ನು ಅನರ್ಹಗೊಳಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಕುಸ್ತಿ ಗೆದ್ದಿತು ಅಮ್ಮ ನಾನು ಸೋತೆ ಎನ್ನುವ ವಿನೇಶ್ ಫೋಗಟ್ ಅವರ ಹೇಳಿಕೆ ನಿಜವಾದ ದೇಶಪ್ರೇಮಿಗಳ ಎದೆಗೆ ಚಾಕುವಿನಿಂದ ಇರಿದಷ್ಟು ನೋವನ್ನುಂಟು ಮಾಡಿದೆ. ನಮ್ಮೊಳಗೆ ಏನೇ ವಿವಾದಗಳಿರಲಿ, ವಿದೇಶಿ ನೆಲದಲ್ಲಿ ನಮ್ಮವರ ಸೋಲಿಗೆ ನಾವು ಕಾರಣರಾದರೆ ಅದಕ್ಕಿಂತ ದೊಡ್ಡ ದೇಶದ್ರೋಹ ಯಾವುದಿದೆ ಹೇಳಿ ಅನ್ನೋ ಪ್ರಶ್ನೆಗಳನ್ನ ಪ್ರಜ್ಞಾವಂತ ಪ್ರಜೆಗಳು ಕೇಳ್ತಾ ಇದ್ದಾರೆ.
ತನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಾರೆ ಎನ್ನುವ ವಿನೇಶ್ ಫೋಗಟ್ ಅವರ ಅನುಮಾನ ನಿಜವಾಯ್ತು. ಸ್ಥಿರವಾಗಿದ್ದ ಅವರ ದೇಹದ ತೂಕ ಏಕಾಏಕಿ ಏರಿಕೆಯಾಯ್ತು. ಒಂದೇ ಬಾರಿಗೆ ಈ ರೀತಿಯಾಗಿ ದೇಹದ ತೂಕ ಏರಿಕೆಯಾಗಲು ಹೇಗೆ ಸಾಧ್ಯ ಅಂತ ಜನ ಕೂಡ ಪ್ರಶ್ನೆ ಮಾಡ್ತಾ ಇದ್ದಾರೆ. ಕುತಂತ್ರಿಗಳನ್ನು ಮಟ್ಟಹಾಕುವವರು ಯಾರು? ಇವರಂತಹವರ ಕೈಯಲ್ಲಿ ಕ್ರೀಡಾ ಕ್ಷೇತ್ರಗಳು ಇದ್ದರೆ, ಪ್ರಾಮಾಣಿಕರ ಆಟಗಾರರಿಗೆ ನ್ಯಾಯ ಸಿಗಬಹುದೇ? ಅಷ್ಟಕ್ಕೂ ಬ್ರಿಜ್ ಭೂಷಣ್ ಕೈಯಲ್ಲೇ ಕುಸ್ತಿ ಫೆಡರೇಷನ್ ಇರಬೇಕು ಅನ್ನೋ ಹಠ ಕೇಂದ್ರ ಸರ್ಕಾರಕ್ಕೆ ಯಾಕೆ? ಇನ್ನಾದ್ರೂ ಕೇಂದ್ರ ಸರ್ಕಾರ ಇಂತಹವರ ಕೈಯಿಂದ ಅಧಿಕಾರ ಕಿತ್ತು, ಬೇರೆಯವರಿಗೆ ಕೊಡಬಾರದೇ ಅನ್ನೋ ಪ್ರಶ್ನೆಗಳು ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth