ಸಾಯಿ ಪಲ್ಲವಿ ನಟನೆಯ  ‘ವಿರಾಟ ಪರ್ವಂ’ ಬಹಿಷ್ಕಾರಕ್ಕೆ ಬಲಪಂಥೀಯರ ಕರೆ! - Mahanayaka
12:44 PM Thursday 21 - August 2025

ಸಾಯಿ ಪಲ್ಲವಿ ನಟನೆಯ  ‘ವಿರಾಟ ಪರ್ವಂ’ ಬಹಿಷ್ಕಾರಕ್ಕೆ ಬಲಪಂಥೀಯರ ಕರೆ!

sai pallavi
17/06/2022


Provided by

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಹಾಗೂ  ರಾಣಾ ದಗ್ಗುಬಾಟಿ ನಟಿಸಿರುವ ತೆಲುಗು ಸಿನಿಮಾ ‘ವಿರಾಟ ಪರ್ವಂ’ ಇಂದು ಬಿಡುಗಡೆಯಾಗಿದ್ದು, ಇದೇ ವೇಳೆ ಸಾಯಿ ಪಲ್ಲವಿ ಅವರು ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಲಪಂಥೀಯ ಸಂಘಟನೆಗಳು ಚಿತ್ರ ಬಹಿಷ್ಕಾರಕ್ಕೆ ಕರೆ ನೀಡಿವೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಾಯಿ ಪಲ್ಲವಿ, ಕಾಶ್ಮೀರ ಪಂಡಿತರ ಹತ್ಯೆ ಹಾಗೂ ದನ ಸಾಗಾಟ ಮಾಡುವವರಿಗೆ ಜೈ ಶ್ರೀರಾಮ್ ಎಂದು ಕೂಗುತ್ತಾ ಮಾಡುವುದು ಎರಡೂ ಒಂದೇ. ಧರ್ಮದ ಹೆಸರಿನ ಹತ್ಯೆಯನ್ನು ಸಹಿಸಿಕೊಳ್ಳಬಾರದು ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಬಲಪಂಥೀಯ ಮಾಧ್ಯಮಗಳಿಗೆ ವಿವಾದಾತ್ಮಕವಾಗಿ ಕಂಡಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ, ನಟಿಯ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸಾಯಿ ಪಲ್ಲವಿ ನಟನೆಯ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು.

ಅಂತ ಹಾಗೆ, ಬಲಪಂಥೀಯ ಸಂಘಟನೆಗಳು ಬಹಿಷ್ಕಾರಕ್ಕೆ ಕರೆ ನೀಡಿದ ಪ್ರತಿ ಚಿತ್ರಗಳು ಕೂಡ ಯಶಸ್ವಿ ಪ್ರದರ್ಶನ ಕಂಡಿವೆ. ಆ ಸಾಲಿಗೆ  ‘ವಿರಾಟ ಪರ್ವಂ’ ಚಿತ್ರ ಕೂಡ ಸೇರಲಿದೆ ಎಂದು ಸಾರ್ವಜನಿಕರು ಈ ಸಂಬಂಧಿತ ವರದಿಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ.  ಇನ್ನೂ ಹೆಚ್ಚಾಗಿ ಬಲಪಂಥೀಯ ವಿಚಾರಧಾರೆಯ ನಟರು ಎನ್ನಲಾಗುತ್ತಿರುವ ನಟ ಅಕ್ಷಯ್ ಕುಮಾರ್ ಹಾಗೂ ಕಂಗನಾ ರನಾವತ್ ಅವರ ಸಿನಿಮಾ ಇತ್ತೀಚೆಗೆ ನೆಲ ಕಚ್ಚಿತ್ತು ಎನ್ನುವ ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಠದ ಸ್ನಾನದ ಗೃಹದಲ್ಲಿ ಸ್ವಾಮೀಜಿಯ ಅನುಮಾನಾಸ್ಪದ ಸಾವು!

ಮಗುವಿಗೆ ಅರಿಶಿಣ ಕುಂಕುಮ ಬಲವಂತವಾಗಿ ತಿನ್ನಿಸಿದ ತಂದೆ: ಬಾಲಕಿಯ ಸ್ಥಿತಿ ಚಿಂತಾಜನಕ

ಮದುವೆಗೆ ತೆರಳುತ್ತಿದ್ದವರ ದುರಂತ ಸಾವು: ಭೀಕರ ಅಪಘಾತಕ್ಕೆ 7 ಬಲಿ

500 ರೂಪಾಯಿ ತೆಗೆದರೆ 2,500 ರೂ. ಕೊಡ್ತಿದ್ದ ಎಟಿಎಂ: ಎಟಿಎಂ ಕೇಂದ್ರದ ಮುಂದೆ ಜನವೋ ಜನ!

ಕೋಣೆಯ ಕರ್ಟನ್ ಸರಿಪಡಿಸುತ್ತಿದ್ದ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ಇತ್ತೀಚಿನ ಸುದ್ದಿ