ರಂಝಾನ್ ತಿಂಗಳಲ್ಲೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿದೆ: ಖ್ಯಾತ ನಟ ವಿವಿಯನ್ ಡಿಸೋನಾ ಮನದ ಮಾತು - Mahanayaka
8:07 AM Wednesday 20 - August 2025

ರಂಝಾನ್ ತಿಂಗಳಲ್ಲೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿದೆ: ಖ್ಯಾತ ನಟ ವಿವಿಯನ್ ಡಿಸೋನಾ ಮನದ ಮಾತು

21/03/2024


Provided by

ಇಸ್ಲಾಂ ಧರ್ಮ ಸ್ವೀಕಾರ ಮಾಡಿರುವುದರ ಕುರಿತಂತೆ ಖ್ಯಾತ ನಟ ವಿವಿಯನ್ ಡಿಸೋನಾ ಮನ ತೆರೆದು ಮಾತಾಡಿದ್ದಾರೆ. ಹಿಂದುಸ್ತಾನ್ ಟೈಮ್ಸ್ ನಡೆಸಿದ ಸಂದರ್ಶನದಲ್ಲಿ ತನ್ನ ಧರ್ಮ ಸ್ವೀಕಾರ ಮತ್ತು ಅದರ ಸುತ್ತಲಿನ ಬೆಳವಣಿಗೆಯ ಬಗ್ಗೆ ಮಾತಾಡಿದ್ದಾರೆ.

ನಾನು ರಂಝಾನ್ ತಿಂಗಳಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದೆ. ಆದ್ದರಿಂದ ರಂಝಾನ್ ತಿಂಗಳು ನನಗೆ ವಿಶೇಷ ತಿಂಗಳಾಗಿದೆ. ನಾನು ರಂಝಾನ್ ನಲ್ಲಿ ಉಪವಾಸ ಆಚರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಉಪವಾಸವು ಮನುಷ್ಯನನ್ನು ಆಧ್ಯಾತ್ಮಿಕ ಉನ್ನತಿಗೆ ಏರಿಸುತ್ತದೆ ಎಂದು ಕೂಡ ಅವರು ಹೇಳಿದ್ದಾರೆ. ನೀರು ಮತ್ತು ಕಾಫಿ ಇಲ್ಲದೆ ಬದುಕುವುದು ನನ್ನಿಂದ ಸಾಧ್ಯವೇ ಇಲ್ಲ ಎಂದು ನಾನು ಭಾವಿಸಿದ್ದೆ. ಅಂತಹ ವ್ಯಕ್ತಿ ಇವತ್ತು 13 ರಿಂದ 14 ಗಂಟೆಗಳ ಕಾಲ ಉಪವಾಸ ವೃತ ಆಚರಿಸುತ್ತಿದ್ದೇನೆ. ಇದನ್ನು ಕಂಡು ನನ್ನ ಕುಟುಂಬ ಮತ್ತು ಗೆಳೆಯರು ಅಚ್ಚರಿ ಪಡುತ್ತಿದ್ದಾರೆ. ದೇವನ ಅನುಗ್ರಹದಿಂದ ಈವರೆಗಿನ ನನ್ನ ಉಪವಾಸ ವೃತವು ಬಹಳ ಆರಾಮವಾಗಿ ಕಳೆದಿದೆ ಎಂದವರು ಹೇಳಿದ್ದಾರೆ.

ಈ ರಮಜಾನ್ ತಿಂಗಳಲ್ಲಿ ತನ್ನ ಕುಟುಂಬದ ಜೊತೆ ಅವರು ಈಗ ಬಹರೈನ್ ನಲ್ಲಿ ಉಳಿದಿದ್ದಾರೆ. ಈಜಿಪ್ಟಿನ ಪತ್ರಕರ್ತೆ ನೂರಿನ್ ಅಲಿಯಾ ರನ್ನು ಇವರು ವಿವಾಹವಾಗಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ