ನಾಳೆ ಲೋಕಸಭೆಯಲ್ಲಿ ವಕ್ಫ್ ಮಸೂದೆ ವರದಿ ಮಂಡನೆ: ಟಿಪ್ಪಣಿ ತಿರುಚಲಾಗಿದೆ ಎಂದ ಕಾಂಗ್ರೆಸ್ - Mahanayaka
4:02 PM Wednesday 15 - October 2025

ನಾಳೆ ಲೋಕಸಭೆಯಲ್ಲಿ ವಕ್ಫ್ ಮಸೂದೆ ವರದಿ ಮಂಡನೆ: ಟಿಪ್ಪಣಿ ತಿರುಚಲಾಗಿದೆ ಎಂದ ಕಾಂಗ್ರೆಸ್

02/02/2025

ವಕ್ಫ್ (ತಿದ್ದುಪಡಿ) ಮಸೂದೆ – 2024 ರ ಜಂಟಿ ಸಮಿತಿಯ ವರದಿಯನ್ನು ಫೆಬ್ರವರಿ 3 ರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಈ ಮಧ್ಯೆ ಸಮಿತಿಯ ವಿರೋಧ ಪಕ್ಷದ ಸದಸ್ಯರ ಭಿನ್ನಾಭಿಪ್ರಾಯ ಟಿಪ್ಪಣಿಯ ಭಾಗಗಳನ್ನು ಅವರ ಒಪ್ಪಿಗೆಯಿಲ್ಲದೆ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


Provided by

ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಮತ್ತು ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಅವರು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ವರದಿಯನ್ನು ಮಂಡಿಸಲಿದ್ದಾರೆ. ಅವರು ಸಮಿತಿಯ ಮುಂದೆ ನೀಡಿದ ಪುರಾವೆಗಳನ್ನು ಸಹ ದಾಖಲಿಸುತ್ತಾರೆ.

ಇನ್ನು ಈ ವರದಿಯನ್ನು ಜನವರಿ 30 ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗಿದೆ. ಅದೇ ದಿನ, ಜಗದಾಂಬಿಕಾ ಪಾಲ್ ಅವರು ಅಂತಿಮ ವರದಿಯನ್ನು ಹಸ್ತಾಂತರಿಸಲು ಸಂಸತ್ತಿನಲ್ಲಿ ಸ್ಪೀಕರ್ ಅವರನ್ನು ಭೇಟಿಯಾಗಿದ್ದರು.

ಜೆಪಿಸಿ ಕರಡು ವರದಿ ಮತ್ತು ತಿದ್ದುಪಡಿ ಮಸೂದೆಯನ್ನು ಜನವರಿ 29 ರ ಬುಧವಾರ ಅಂಗೀಕರಿಸಿತು. ವರದಿಯ ಬಗ್ಗೆ ವಿರೋಧ ಪಕ್ಷದ ನಾಯಕರು ಭಿನ್ನಾಭಿಪ್ರಾಯ ಟಿಪ್ಪಣಿಗಳನ್ನು ಸಲ್ಲಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ