ವಕ್ಫ್ ಮಸೂದೆ ವಿವಾದ: ಜಂಟಿ ಸದನ ಸಮಿತಿ ಜತೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಾತುಕತೆ - Mahanayaka
10:11 PM Monday 15 - December 2025

ವಕ್ಫ್ ಮಸೂದೆ ವಿವಾದ: ಜಂಟಿ ಸದನ ಸಮಿತಿ ಜತೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಾತುಕತೆ

24/08/2024

ವಕ್ಫ್ ಮಸೂದೆಯ ಕುರಿತಂತೆ ಪರಿಶೀಲನೆಗಾಗಿ ರಚಿಸಲಾಗಿರುವ ಜಂಟಿ ಸದನ ಸಮಿತಿಯ ಸಂಚಾಲಕ ಜಗದಾಂಬಿಕ ಪಾಲ್ ಅವರನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ನಿಯೋಗವು ಭೇಟಿಯಾಗಿ ಮನವಿ ಸಲ್ಲಿಸಿದೆ. ತಕ್ಷಣವೇ ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ನಿಯೋಗ ಒತ್ತಾಯಿಸಿದೆ.

ನಿಯೋಗದಲ್ಲಿ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಮೌಲಾನ ಮೊಹಮ್ಮದ್ ಫಜಲುರ್ರಹೀಮ್ ಮುಜದ್ದಿದಿ, ಕಾನೂನು ಸಮಿತಿಯ ಸದಸ್ಯರಾದ ಶಂಶದ್ ಮತ್ತು ನ್ಯಾಯವಾದಿ ಹುಸೈನ್ ಅಹಮದ್ ಅಯ್ಯುಬಿ,, ಮಾಜಿ ಸಚಿವ ರಹಮಾನ್ ಖಾನ್, ಮೌಲಾನ ಅಬು ತಾಲಿಬ್ ರಹಮನಿ,, ಮೌಲಾನಾ ಮುತೀವುರೆಹ್ಮಾನ್ ಮದನಿ ಮತ್ತು ಡಾಕ್ಟರ್ ವಕಾರುದ್ದೀನ್ ಲತೀಫ್ ಹಾಗೂ ಬಿಹಾರದ ಶಾಸಕ ಡಾಕ್ಟರ್ ಖಾಲಿದ್ ಅನ್ವರ್ ಅವರು ಇದ್ದರು.‌‌

ತಮ್ಮ ಮಾತುಗಳನ್ನು ಜೆಪಿಸಿ ಸಂಚಾಲಕ ಜಗದಾಂಬಿಕಾ ಪಾಲ್ ಅವರು ಸಹನೆಯಿಂದ ಆಲಿಸಿದ್ದಾರೆ ಮತ್ತು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಕ್ಕಿಂತ ಮೊದಲು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಹಿತ ಮುಸ್ಲಿಮರ ವಿವಿಧ ಸಂಘಟನೆಗಳ ಮಾತುಗಳನ್ನು ಆಲಿಸಿಯೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ನಿಯೋಗ ತಿಳಿಸಿದೆ. ಮಸೂದೆಯ 44 ತಿದ್ದುಪಡಿಗಳನ್ನು ಅಧ್ಯಯನ ನಡೆಸಿ ಬೋರ್ಡ್ ತನ್ನ ನಿಲುವನ್ನು ಜೆಪಿಸಿ ಸಮಿತಿಗೆ ತಿಳಿಸಿದೆ. ಯಾವ ಯಾವ ತಿದ್ದುಪಡಿಗಳು ಹೇಗೆ ಮುಸ್ಲಿಂ ಸಮುದಾಯದ ಪಾಲಿಗೆ ಅಪಾಯಕಾರಿ ಎಂಬುದನ್ನು ವಿವರಿಸಿದೆ ಎಂದು ತಿಳಿದು ಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ