ನಟ ಸೈಫ್ ಮೇಲಿನ ದಾಳಿ ನಾಟಕವಂತೆ: ಬೊಗಳೆ ಬಿಟ್ಟು ವಿವಾದ ಸೃಷ್ಟಿಸಿದ ಮಹಾರಾಷ್ಟ್ರ ಸಚಿವ - Mahanayaka

ನಟ ಸೈಫ್ ಮೇಲಿನ ದಾಳಿ ನಾಟಕವಂತೆ: ಬೊಗಳೆ ಬಿಟ್ಟು ವಿವಾದ ಸೃಷ್ಟಿಸಿದ ಮಹಾರಾಷ್ಟ್ರ ಸಚಿವ

23/01/2025

ದ್ವೇಷ ಭಾಷಣಕ್ಕೆ ಕುಪ್ರಸಿದ್ಧಿಯನ್ನು ಹೊಂದಿರುವ ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯ ಮೂಲಕ ಚರ್ಚೆಯಲ್ಲಿದ್ದಾರೆ. ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿಯು ಚಿತ್ರಕಥೆಯ ಮೂಲಕ ಹೆಣೆದ ನಾಟಕವಾಗಿತ್ತು ಎಂದವರು ಹೇಳಿದ್ದಾರೆ. ಮುಂಬೈಯಲ್ಲಿ ನಡೆದ ಹಿಂದೂ ಮಹೋತ್ಸವ ರ್ಯಾಲಿಯಲ್ಲಿ ಮಾತಾಡುತ್ತಾ ಸೈಫ್ ಅಲಿ ಖಾನ್ ಅವರನ್ನ ನಿತೀಶ್ ರಾಣೆ ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗುವ ಸೈಫ್ ಅಲಿ ಖಾನ್ ಅನ್ನು ನಾನು ನೋಡಿದೆ. ಅವರಿಗೆ ನಿಜಕ್ಕೂ ಚೂರಿ ಇರಿತ ಆಗಿರುತ್ತಿದ್ದರೆ ಅವರು ಹೀಗೆ ನಡ್ಕೊಂಡು ಹೋಗುವುದಕ್ಕೆ ಸಾಧ್ಯವೇ ಎಂದು ಆಲೋಚಿಸಿದೆ. ಸೈಫ್ ನೃತ್ಯ ಮಾಡುತ್ತಾ ನಡ್ಕೊಂಡು ಹೋಗಿದ್ದಾರೆ. ದೇಹದ ಮೇಲೆ ಆರು ಬಾರಿ ಇರಿತಕ್ಕೆ ಒಳಗಾದ ವ್ಯಕ್ತಿ ಹೀಗೆ ನಡೆದುಕೊಂಡು ಹೋಗಲು ಸಾಧ್ಯವೇ? ಶಾರುಖ್ ಖಾನ್ ಅಥವಾ ಸೈಫ್ ಅಲಿ ಖಾನ್ ಅವರಿಗೆ ಏನಾದ್ರೂ ತೊಂದರೆ ಆದರೆ ಎಲ್ಲರೂ ಅವರ ಬಗ್ಗೆ ಮಾತಾಡ್ತಾರೆ ಎಂದು ನಿತೀಶ್ ರಾಣೆ ಹೇಳಿದ್ದಾರೆ.

ಸೈಫ್ ನ ಧರ್ಮದ ಕಾರಣದಿಂದಲೇ ಈ ವಿಷಯಕ್ಕೆ ಇಷ್ಟೊಂದು ಮಹತ್ವ ಸಿಕ್ಕಿದೆ. ಒಂದು ವೇಳೆ ಓರ್ವ ಹಿಂದೂ ನಟನಿಗೆ ಹೀಗೆಯೇ ದಾಳಿ ಆಗಿರುತ್ತಿದ್ದರೆ ಇಷ್ಟೊಂದು ಮಹತ್ವ ಆತನಿಗೆ ಸಿಗುತ್ತಿತ್ತೇ ಎಂದವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಲ್ಲಿ ಈ ಕುರಿತಂತೆ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ