ವಯನಾಡ್.? ರಾಯ್ ಬರೇಲಿ..?: ಎರಡರಲ್ಲಿ ಒಂದರ ಆಯ್ಕೆಯು ನನಗೆ ಸಂದಿಗ್ಧತೆ ಸೃಷ್ಟಿಸಿದೆ: ರಾಹುಲ್ ಗಾಂಧಿ

ತಾವು ಆಯ್ಕೆಯಾಗಿರುವ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರಗಳ ಪೈಕಿ ಯಾವುದನ್ನು ಉಳಿಸಿಕೊಳ್ಳಬೇಕೆಂಬ ಸಂದಿಗ್ಧತೆ ತನಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದುರದೃಷ್ಟವಶಾತ್ ಪ್ರಧಾನಿ ನರೇಂದ್ರ ಮೋದಿಯವರಂತೆ ನನಗೆ ದೇವರು ಮಾರ್ಗದರ್ಶನ ನೀಡುತ್ತಿಲ್ಲ ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನಂತರ ವಯನಾಡ್ ಕ್ಷೇತ್ರದಲ್ಲಿ ಅವರಿಗೆ ನಡೆದ ಮೊದಲ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್,
“ದುರದೃಷ್ಟವಶಾತ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ನನಗೆ ದೇವರು ಮಾರ್ಗದರ್ಶನ ನೀಡುತ್ತಿಲ್ಲ, ಬದಲು ಈ ದೇಶದ ಬಡವರು ಮಾರ್ಗದರ್ಶನ ನೀಡುತ್ತಾರೆ. ಹೀಗಿರುವಾಗ ನಿರ್ಧಾರ ತೆಗೆದುಕೊಳ್ಳುವುದು ನನಗೆ ಅಷ್ಟು ಸುಲಭವಲ್ಲ. ಆದರೆ ನಾನೇನೇ ನಿರ್ಧಾರ ಕೈಗೊಂಡರೂ ಎರಡೂ ಕ್ಷೇತ್ರದ ಜನತೆಗೆ ಸಂತೋಷವಾಗುವುದೆಂಬ ನಂಬಿಕೆ ಇದೆ,” ಎಂದು ರಾಹುಲ್ ಹೇಳಿದರು.
ತಮ್ಮ ಕೈಯ್ಯಲ್ಲಿ ದೇಶದ ಸಂವಿಧಾನದ ಪ್ರತಿಯೊಂದನ್ನು ಹಿಡಿದುಕೊಂಡಿದ್ದ ರಾಹುಲ್, ತಾವು ಸಂವಿಧಾನದ ರಕ್ಷಣೆಗಾಗಿ ಈ ಚುನಾವಣೆಯಲ್ಲಿ ಹೋರಾಡಿದ್ದಾಗಿ ತಿಳಿಸಿದರು.
ವಯನಾಡ್‌ಗೆ ಒಂದು ದಿನದ ಭೇಟಿಗೆ ಆಗಮಿಸಿದ ರಾಹುಲ್ ಗಾಂಧಿರಿಗೆ ಅಭೂತಪೂರ್ವ ಸ್ವಾಗತ ದೊರಕಿದೆ. ವಯನಾಡ್ ಕ್ಷೇತ್ರದ ಭಾಗವಾಗಿರುವ ಮಲಪ್ಪುರಂ ಎಡವನ್ನ ಎಂಬಲ್ಲಿ ಆಯೋಜಿಸಲಾದ ರೋಡ್ ಶೋದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth