ವಯನಾಡು ದುರಂತ: ಪೋಸ್ಟ್ ಮಾರ್ಟಂಗಾಗಿ ಜಾಗ ಬಿಟ್ಟುಕೊಟ್ಟ ಮದ್ರಸಾ

ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಪೋಸ್ಟ್ ಮಾರ್ಟಂ ನಡೆಸುವುದಕ್ಕಾಗಿ ಮದ್ರಸಾವೊಂದು ತನ್ನ ಹಾಲನ್ನು ಬಿಟ್ಟು ಕೊಟ್ಟಿರುವುದಾಗಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಚುಳ್ಳಿಕ್ಕಾ ಎಂಬಲ್ಲಿಯ ಮದರಸ ಹಾಲನ್ನು ಪೋಸ್ಟ್ ಮಾರ್ಟಂಗೆ ಬಿಟ್ಟುಕೊಡಲಾಗಿದೆ, ಆದ್ದರಿಂದ ಆ ಹಾಲಲ್ಲಿ ಕೂಡ ನಾವು ಪೋಸ್ಟ್ಮಾರ್ಟಮ್ ನಡೆಸುವುದಕ್ಕೆ ಬೇಕಾದ ಏರ್ಪಾಡು ಮಾಡುತ್ತೇವೆ ಎಂದು ಸಚಿವೆ ಹೇಳಿದ್ದಾರೆ.
ವಯನಾಡು ಭೂಕುಸಿತಕ್ಕೆ ಸಂಬಂಧಿಸಿದ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸಹಕರಿಸುತ್ತಿರುವ ಸುದ್ದಿಗಳು ಎಲ್ಲೆಡೆ ವರದಿಯಾಗುತ್ತಿವೆ. ಭೂಕುಸಿತದಲ್ಲಿ ಜೀವಂತವಾಗಿ ಉಳಿದಿರುವ ಶಿಶುಗಳಿಗೆ ಎದೆಹಾಲು ಉಣಿಸಲು ತಾಯಂದಿರು ಮುಂದೆ ಬರುವವರೆಗೆ ಯುದ್ಧೋಪಾದಿಯಲ್ಲಿ ಪರಿಹಾರ ಕೆಲಸಗಳು ಕೂಡ ನಡೆಯುತ್ತಿವೆ. ಈ ನಡುವೆ ಮದರಸ ಒಂದು ತನ್ನ ಹಾಲನ್ನೇ ಪೋಸ್ಟ್ಮಾರ್ಟಮ್ ಗಾಗಿ ಬಿಟ್ಟು ಕೊಟ್ಟಿರುವುದು ಬಾರಿ ಶ್ಲಾಘನೆಗೆ ಪಾತ್ರವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth