ವಯನಾಡ್ ದುರಂತ: ಯುಎಇ ನಾಗರಿಕರಿಂದಲೂ ಮಾನವೀಯ ನೆರವು

ವಯನಾಡ್ ದುರಂತಕ್ಕೆ ಯುಎಇ ನಾಗರಿಕರಾದ ನೂರ ಮತ್ತು ಮರಿಯ ಎಂಬ ಸಹೋದರಿಯರು ನೆರವಾಗಿದ್ದಾರೆ. ಮುಖ್ಯಮಂತ್ರಿ ನಿಧಿಗೆ ಅವರು ಈ ಪರಿಹಾರವನ್ನು ಮೊತ್ತವನ್ನು ನೀಡಿದ್ದು ಆದರೆ ಅದೆಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಮಲಯಾಳಂ ಭಾಷೆ ಮಾತಾಡುವ ಮೂಲಕ ವಿಡಿಯೋ ಮಾಡುವ ಮೂಲಕ ಮತ್ತು ರೀಲ್ಸ್ ಗಳ ಮೂಲಕ ಇವರಿಬ್ಬರೂ ಮಲಯಾಳಂ ಭಾಷಿಕರಿಗೆ ಪರಿಚಿತರಾಗಿದ್ದಾರೆ.
ಇವರಿಬ್ಬರ ವಿಡಿಯೋಗಳಿಗೆ ಕೇರಳದಲ್ಲಿ ಸಾಕಷ್ಟು ಫಾಲೋವರ್ಸ್ ಗಳು ಇದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಮಮ್ಮುಟ್ಟಿ ಅವರ ಟರ್ಬೋ ಸಿನಿಮಾ ಅರಬಿ ಭಾಷೆಗೆ ಡಬ್ ಮಾಡಿದಾಗ ಪ್ರಮುಖ ಪಾತ್ರಕ್ಕೆ ಇವರಿಬ್ಬರು ಧ್ವನಿ ನೀಡಿದ್ದರು. ಯು ಎಇ ಯಲ್ಲಿರುವ ಮಲಯಾಳಿಗಳು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗುತ್ತಿರುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth