ಡಿಜಿಟಲ್ ಉಪವಾಸದಿಂದ ಆಗುವ ಲಾಭ- ನಷ್ಟಗಳೇನು? - Mahanayaka

ಡಿಜಿಟಲ್ ಉಪವಾಸದಿಂದ ಆಗುವ ಲಾಭ– ನಷ್ಟಗಳೇನು?

digital festing
02/02/2023

ವಾರದಲ್ಲಿ ಒಂದು ದಿನ ಆದರೂ ಡಿಜಿಟಲ್ ಸಾಧನಗಳು ಮತ್ತು ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿಯುವುದು ಮತ್ತು ಸೀಮಿತ ಅವಧಿಯಲ್ಲಿ ಅಥವಾ ಕಡಿಮೆ ಸಮಯದಲ್ಲಿ ಅವುಗಳನ್ನು ಉಪಯೋಗಿಸುವುದಾಗಿದೆ ಉದಾಹರಣೆಗೆ (ಮೊಬೈಲ್, ಫೇಸ್ಬುಕ್,ಟ್ವಿಟರ್, ಇನ್ಸ್ಟಾಗ್ರಾಮ್, ಮೆಸೆಂಜರ್)

ಡಿಜಿಟಲ್ ಉಪವಾಸದಿಂದ ಆಗುವ ಲಾಭಗಳು:

  1. ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಬೆರೆಯಬಹುದು, 2.ಅಧ್ಯಯನದ ಮೇಲೆ ಅಗತ್ಯ ನಿಗವಹಿಸಬಹುದು.
  2. ವಿವೇಚನಾ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ 4.ಸ್ವತಂತ್ರವಾಗಿ ಯೋಚಿಸಲು ಸಹಾಯಕವಾಗಿದೆ.

5.ಮಾನಸಿಕ ಖಿನ್ನತೆಗೆ ಒಳಪಡುವ ಕೆಲವು ಗೇಮ್ ಗಳಿಂದ ನೆಮ್ಮದಿ ಕಾಪಾಡಿಕೊಳ್ಳಬಹುದು.

6.ದೈಹಿಕ ಸಮಸ್ಯೆಗಳಿಂದ ಮುಕ್ತರಾಗಬಹುದು ಉದಾ ತಲೆನೋವು ಬೆನ್ನು ನೋವು ಇತ್ಯಾದಿ.

ಡಿಜಿಟಲ್ ಉಪವಾಸ ಸಾಮಾನ್ಯನ ಆರ್ಥಿಕ ಹೊರೆಯನ್ನು ತಗ್ಗಿಸಲಿ:

ನಾನು ಮಧ್ಯಮ ವರ್ಗದವ,  ಪ್ರತಿನಿತ್ಯ ಕೊಡಿಸಿ, ಬಾಗಿಸಿ, ಗುಣಿಸಿ ಒಂದು ರೂಪಾಯಿ ಉಳಿಸುವುದರಲ್ಲಿ ಹರಸಾಹಸ ಪಡುತ್ತೇನೆ ಈ ಡಿಜಿಟಲ್ ಉಪವಾಸದಿಂದ ನಮ್ಮ ಆರ್ಥಿಕ ಹೊರೆ ತಗ್ಗಲಿ ಎಂಬುದೇ ನನ್ನ ಮನವಿ. ಉದಾಹರಣೆಗೆ ಒಂದು ಅಂದಾಜಿನ ಪ್ರಕಾರ

1 ವ್ಯಕ್ತಿ 1 ದಿನ 1 ಜಿಬಿ – 5 ರೂಪಾಯಿ

1 ವ್ಯಕ್ತಿ 30 ದಿನ 30 ಜಿಬಿ -150 ರೂಪಾಯಿ

1ವ್ಯಕ್ತಿ 365 ದಿನ 365 ಜಿಬಿ -1825

10.00.000 ಜನ*1ಜಿಬಿ*5 ರೂಪಾಯಿ=1ದಿನಕ್ಕೆ 50.00.000 ಲಕ್ಷ ರೂಪಾಯಿ 365 ದಿನಕ್ಕೆ 182.50.00.000(182 ಕೋಟಿ 50 ಲಕ್ಷ ಸಾವಿರ ರೂಪಾಯಿ) ನಮ್ಮ ದೇಶದ ಎಲ್ಲಾ ಜನಸಂಖ್ಯೆ ಪರಿಗಣಿಸಿದಾಗ ಆಗುವ ಉಳಿತಾಯ ನೀವೇ ಪರಿಗಣಿಸಬೇಕು.

ಇಲ್ಲಿಯವರೆಗೆ ಅದೆಷ್ಟೋ ಜನ ಒಂದು ವರ್ಷದ ಡೇಟಾ ಪ್ಯಾಕ್ ಮಾಡಿಕೊಂಡಿದ್ದಾರೆ ಬಡ ತಂದೆ ತಾಯಿ ಸಾಲ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆನ್ಲೈನ್ ತರಗತಿಗಳ ಮೊರೆ ಹೋಗಿ, ಹಲವಾರು ಕಂಪನಿಗಳಿಗೆ ದುಡ್ಡನ್ನು ಹಾಕಿದ್ದಾರೆ, ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ನನ್ನ ಮನವಿ

1.ಉಳಿದ ಡೇಟಾವನ್ನು ಮರಳಿ ನೀಡುವಂತಾಗಲಿ.

2.ಅದನ್ನ ಮುಂದಿನ ದಿನಗಳಲ್ಲಿ ಉಪಯೋಗಿಸಲು ಅನುವು ಮಾಡಿಕೊಡಲಿ.

  1. ಉಳಿದ ಡೇಟಾ ಬದಲಾಗಿ ಅದಕ್ಕೆ ಸಮನಾದ ಹಣವನ್ನ ಮರಳಿ ನೀಡಿದರೆ ತುಂಬಾ ಉಪಯೋಗವಾಗುತ್ತದೆ.

4.ಅವಧಿ ಮುಗಿದ ನಂತರ ಬಳಸಲು ಅವಕಾಶ ಮಾಡಿಕೊಡಬೇಕು.

5.ಉಳಿದ ಡೆಟಾ ಬದಲಾಗಿ ಗಿಫ್ಟ್ ವೋಚರಗಳನಾದರು ನೀಡಲಿ.

  1. ಜನಧನ್ ಖಾತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ ಉಪಯೋಗಿಸದೆ ಇರುವ ಡೇಟಾ ಬದಲಾಗಿ ಹಣ ಸಂದಾಯವಾಗಲಿ.

ಇದು ಒಬ್ಬ ಸಾಮಾನ್ಯನ ಕರೆ, ಈ ಕರೆಯನ್ನು ದೊಡ್ಡ ದೊಡ್ಡ ಕಂಪನಿಗಳು ಸ್ವೀಕರಿಸಿ ಸಾಮಾನ್ಯನ ಜೇಬಿನ ಹೊರೆಯನ್ನು ಇಳಿಸಬೇಕೆಂಬುದೇ ನನ್ನ ಕಳಕಳಿ ವಿನಂತಿ.

–ಚಂದ್ರಕಾಂತ ಹಿರೇಮಠ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

 

ಇತ್ತೀಚಿನ ಸುದ್ದಿ