ಹುತಾತ್ಮ ಯೋಧ ಅಬ್ದುಲ್ ಹಮೀದ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ - Mahanayaka

ಹುತಾತ್ಮ ಯೋಧ ಅಬ್ದುಲ್ ಹಮೀದ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ

01/07/2024


Provided by

ಪರಮವೀರ ಚಕ್ರ ಪುರಸ್ಕೃತ ಹುತಾತ್ಮ ಯೋಧ ಅಬ್ದುಲ್ ಹಮೀದ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಭಾಗವತ್, ‘ವೈವಿಧ್ಯಗಳ ಹೊರತಾಗಿಯೂ ಭಾರತವು ಒಂದು ರಾಷ್ಟ್ರ ಮತ್ತು ಒಂದು ಸಮಾಜವಾಗಿದೆ’ ಎಂದಿದ್ದಾರೆ.
ಅಬ್ದುಲ್ ಹಮೀದ್ ರ ಹುಟ್ಟೂರಾದ ಉತ್ತರ ಪ್ರದೇಶದ ಗಾಜಿಪುರದ ಧಾಮುಪುರ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಬ್ದುಲ್ ಹಮೀದ್, 1965ರಲ್ಲಿ ಖೇಮ್‌ಕರಣ್ ವಲಯದಲ್ಲಿ ಪಾಕಿಸ್ತಾನದ ದಾಳಿಯನ್ನು ಏಕಾಂಗಿಯಾಗಿ ಎದುರಿಸಿದ್ದರು. ಶತ್ರು ಪಾಳಯದ ಟ್ಯಾಂಕುಗಳನ್ನು ತಮ್ಮ ಆರ್‌ಸಿಎಲ್ ಗನ್‌ಗಳಿಂದ ಉಡಾಯಿಸಿದ್ದರು.
ಆದರೂ, ಈ ಯುದ್ಧದಲ್ಲಿ ಹೋರಾಡುತ್ತಾ ವೀರ ಮರಣವನ್ನಪ್ಪಿದರು. ಹಮೀದ್ ರ ಬಲಿದಾನ ಗೌರವಿಸಿ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ