ಪೊಲೀಸರ ವಿಚಾರಣೆ ವೇಳೆ ಘಟನೆಯ ಬಗ್ಗೆ ದರ್ಶನ್ ಹೇಳಿದ್ದೇನು?: ಸಂಜೆ 6:30ಕ್ಕೇ ಕೊಲೆ ನಡೆದಿತ್ತೇ? - Mahanayaka

ಪೊಲೀಸರ ವಿಚಾರಣೆ ವೇಳೆ ಘಟನೆಯ ಬಗ್ಗೆ ದರ್ಶನ್ ಹೇಳಿದ್ದೇನು?: ಸಂಜೆ 6:30ಕ್ಕೇ ಕೊಲೆ ನಡೆದಿತ್ತೇ?

darshan
12/06/2024


Provided by

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ವಿಚಾರಣೆ ವೇಳೆ,  ನಾನು ಕೊಲೆ ಮಾಡಿಲ್ಲ ಸರ್ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ಪೊಲೀಸರು ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಪ್ರಶ್ನೆ ಮಾಡಿದರೂ, ದರ್ಶನ್ ತಪ್ಪೊಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ. ಕಮಿಷನರ್ ಮುಂದೆಯೂ ದರ್ಶನ್ ತಪ್ಪೊಪ್ಪಿಕೊಂಡಿಲ್ಲ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ಮೂರು ತಂಡ ಮಾಡಿ ಇಟ್ಟಿದ್ದಾರೆ. ಹೀಗಾಗಿ ಆರೋಪಿಗಳ ನಡುವೆ ಚರ್ಚೆ ಸಾಧ್ಯವಾಗಿಲ್ಲ. ಆರೋಪಿಗಳನ್ನು ಜೊತೆಯಾಗಿಟ್ಟರೆ, ತನಿಖೆಯ ದಿಕ್ಕು ತಪ್ಪುವ ಸಾಧ್ಯತೆ ಹಿನ್ನೆಲೆ ಇದಕ್ಕೆ ಪೊಲೀಸರು ಅವಕಾಶ ನೀಡಿಲ್ಲ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೊಸದೊಂದು ಟ್ವಿಸ್ಟ್ ಬಂದಿದೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದು ಸಂಜೆ 6.30ಕ್ಕೆ ಎಂದು ತನಿಖೆ ವೇಳೆ ರಿವೀಲ್ ಆಗಿದೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ರೇಣುಕಾಸ್ವಾಮಿಯನ್ನು ರಾಘವೇಂದ್ರ ಕರೆ ತಂದಿದ್ದರು ಎನ್ನಲಾಗಿದೆ. ನಂದೀಶ್, ರಾಘವೇಂದ್ರ ಹಾಗೂ ಮತ್ತಿಬ್ಬರಿಂದ ರೇಣುಕಾಸ್ವಾಮಿ ಕಿಡ್ನಾಪ್ ಮಾಡಲಾಗಿದೆ ಎಂದು ತನಿಖೆಯ ವೇಳೆ ರಿವೀಲ್ ಆಗಿದೆ.

ಬೆಂಗಳೂರಿಗೆ ಕರೆತಂದು ವಿನಯ್ ಶೆಡ್ ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿಡಲಾಗಿತ್ತು ಎನ್ನಲಾಗಿದೆ. ಸಂಜೆ 6 ಗಂಟೆಗೆ ಪವನ್, ನಂದೀಶ್, ಕಾರ್ತಿಕ್ ಸೇರಿ ಎಲ್ಲರಿಂದ ಹಲ್ಲೆ ನಡೆದಿದೆ ಎಂದು ತನಿಖೆ ವೇಳೆ ರಿವೀಲ್ ಆಗಿದೆ. ಕಾಲು ಹಿಡಿದು ರೇಣುಕಾಸ್ವಾಮಿಯನ್ನು ಗೋಡೆಗೆ ಹೊಡೆದಿದ್ದರು ಎಂದು ತಿಳಿದುಬಂದಿದೆ. ಅದಾದ ಬಳಿಕ ದರ್ಶನ್ ಶೆಡ್ ಗೆ ಎಂಟ್ರಿ ಕೊಟ್ಟಿದ್ದರು. ದರ್ಶನ್ ಕೂಡಾ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಿಗ್ಗಾಮುಗ್ಗ ಥಳಿತಕ್ಕೆ ರೇಣುಕಾಸ್ವಾಮಿ ಪ್ರಾಣ ಬಿಟ್ಟಿದ್ದಾರೆ. ನಂತರ ಮೂವರನ್ನ ಶರಣಾಗತಿ ಮಾಡಿ ಹಣ ನೀಡಲು ಪ್ಲಾನ್ ಮಾಡಲಾಗಿತ್ತು. ಹಣ ತಲುಪಿದ ನಂತರವೇ ರೇಣುಕಾಸ್ವಾಮಿ ಮೃತದೇಹ ಡಿಸ್ಪೋಸ್ ಮಾಡಲಾಗುತ್ತದೆ ಎನ್ನಲಾಗಿತ್ತು. ಸಂಜೆ 6.30 ಕ್ಕೆ ಸಾವನ್ನಪ್ಪಿದ ರೇಣುಕಾಸ್ವಾಮಿ ಮೃತದೇಹ, ರಾತ್ರಿ 1.30ಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ತನಿಖೆ ಸಂದರ್ಭ ರಿವೀಲ್ ಆಗಿದೆ ಎಂದು ವರದಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ