ಇಸ್ರೇಲ್ ವಿರುದ್ಧ ಯುದ್ಧಾಪರಾಧದ ಹೊಣೆ: ಅಮೆರಿಕ ವಿರೋಧ ವ್ಯಕ್ತಪಡಿಸಿದ್ಯಾಕೆ..?

ಗಾಝಾ ಆಕ್ರಮಣಕ್ಕೆ ಸಂಬಂಧಿಸಿ ಇಸ್ರೇಲಿ ಆಡಳಿತದ ವಿರುದ್ಧ ಯುದ್ಧಾಪರಾಧ ಹೊರಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿರ್ದೇಶನ ನೀಡಿರುವುದಕ್ಕೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಮತ್ತು ವಿದೇಶಾಂಗ ಸಚಿವ ಗ್ಯಾಲೆಂಟ್ ಅವರನ್ನು ಬಂಧಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ಪ್ರಾಸಿಕ್ಯೂಟರ್ ಅವರ ಆದೇಶ ಅನ್ಯಾಯದ್ದಾಗಿದೆ ಎಂದು ಜೋಬೈಡನ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯಾವ ರೀತಿಯಲ್ಲಿಯೂ ಹೋಲಿಕೆ ಸಲ್ಲ. ಗಾಝಾದಲ್ಲಿ ನಡೆಯುತ್ತಿರುವುದು ಜನಾಂಗ ಹತ್ಯೆಯೂ ಅಲ್ಲ ಎಂದವರು ಸಮರ್ಥಿಸಿಕೊಂಡಿದ್ದಾರೆ.
ಇಸ್ರೇಲ್ ಈ ಮೊದಲೇ ಈ ವಾರೆಂಟನ್ನು ತಿರಸ್ಕರಿಸಿತ್ತು. ಇದೇ ವೇಳೆ ದಕ್ಷಿಣ ಆಫ್ರಿಕಾ ಮತ್ತು ಬೆಲ್ಜಿಯಂಗಳು ಐಸಿಸಿ ಯ ವಾರಂಟನ್ನು ಸ್ವಾಗತಿಸಿದೆ . ಹಮಾಸ್ ಮತ್ತು ಇಸ್ರೇಲ್ ಅನ್ನು ಹೋಲಿಕೆ ಮಾಡಿರುವ ಈ ತೀರ್ಪನ್ನು ನಾವು ನಿರಾಕರಿಸುತ್ತೇವೆ. ನಮ್ಮ ಸಹೋದರರ ಶಿರಚ್ಚೇದ ಮಾಡಿದ ಹತ್ಯೆ ಮಾಡಿದ ಬಲಾತ್ಕಾರ ಮಾಡಿದ ಹಮಾಸ್ ನ ವಿರುದ್ಧ ನಾವು ನ್ಯಾಯಯುತ ಯುದ್ಧ ಸಾರಿದ್ದೇವೆ. ನಮ್ಮನ ಹಮಾಸ್ ನೊಂದಿಗೆ ಹೋಲಿಕೆ ಮಾಡಿದ ಈ ತೀರ್ಪನ್ನು ನಾವು ನಿರಾಕರಿಸುತ್ತೇವೆ ಎಂದು ಇಸ್ರೇಲ್ ಹೇಳಿದೆ. ಇದೇ ವೇಳೆ ಸಂತ್ರಸ್ತರು ಮತ್ತು ಬೇಟೆಗಾರರನ್ನು ಒಂದೇ ರೀತಿಯಲ್ಲಿ ಕಾಣುವ ಈ ತೀರ್ಪು ಯಾರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂಬುದು ನಮಗೆ ಗೊತ್ತಿದೆ ಎಂದು ಹಮಾಸ್ ಮತ್ತು ಫೆಲಸ್ಥಿನಿ ಸಂಘಟನೆಗಳು ಹೇಳಿವೆ. ನೇತಾನ್ಯಾಹು ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲು ಐಸಿಸಿ ಏಳು ತಿಂಗಳಷ್ಟು ದೀರ್ಘ ಸಮಯವನ್ನು ತೆಗೆದುಕೊಂಡಿರುವುದನ್ನು ಕೂಡ ಹಮಾಸ್ ಪ್ರಶ್ನೆಸಿದೆ. ಹಮಾಸ್ ನಾಯಕನ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿರುವುದಕ್ಕೂ ಕೂಡ ವಿರೋಧ ವ್ಯಕ್ತಪಡಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth