ಮನೆ ಬಾಗಿಲಿಗೆ ಬಂದ ಕಾಡಾನೆ: ಆತಂಕದಲ್ಲಿ ಗ್ರಾಮಸ್ಥರು - Mahanayaka

ಮನೆ ಬಾಗಿಲಿಗೆ ಬಂದ ಕಾಡಾನೆ: ಆತಂಕದಲ್ಲಿ ಗ್ರಾಮಸ್ಥರು

Wild elephant
17/04/2025


Provided by

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಇದೀಗ ಮನೆಯೊಂದರ ಬಾಗಿಲಿಗೆ ಒಂಟಿ ಸಲಗವೊಂದು ಬಂದಿದೆ.

ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯಶವಂತ್ ಎಂಬುವರ ಮನೆ ಬಾಗಿಲಿಗೆ ಒಂಟಿ ಸಲಗವೊಂದು ಬಂದಿದೆ.

ಆನೆ ಬಂದ ದೃಶ್ಯವನ್ನ ಮೊಬೈಲ್ ನಲ್ಲಿ ಮನೆ ಮಾಲೀಕ ಸೆರೆ ಹಿಡಿದ್ದಾರೆ. ಆನೆ ಗ್ರಾಮಕ್ಕೆ ಬಂದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದ್ದು, ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ