ಇಬ್ಬರನ್ನು ಬಲಿಪಡೆದಿದ್ದ ಕಾಡಾನೆ ಸೆರೆ

ಚಿಕ್ಕಮಗಳೂರು: ರೈತರ ಆಕ್ರೋಶಕ್ಕೆ ಬೆದರಿದ ಸರ್ಕಾರ–ಅರಣ್ಯ ಇಲಾಖೆ ರೈತರು ಪ್ರತಿಭಟನೆ ನಡೆಸಿ 24 ಗಂಟೆ ಕಳೆಯುವ ಮುನ್ನವೇ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ.
ಇಬ್ಬರನ್ನ ಬಲಿ ಪಡೆದಿದ್ದ ಪುಂಡಾನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಗ್ಗ ಹಾಕಿದ್ದಾರೆ. ಖಾಂಡ್ಯ ಸಮೀಪ ಬಿಳುಕೊಪ್ಪ ಅರಣ್ಯ ಪ್ರದೇಶದಲ್ಲಿ ಪುಂಡಾನೆ ಸೆರೆಯಾಗಿದೆ.
ಎಲೆಕಲ್ಲು ಸಮೀಪದ ಅಂಡುವಾನೆಯಲ್ಲಿ ಕಾಡಾನೆಗೆ ವೈದ್ಯರು ಅರವಳಿಕೆ ನೀಡಿದ್ದರು. ಚುಚ್ಚುಮದ್ದು ನೀಡಿದ್ರು ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದ ಪುಂಡ ಸಲಗ, ಅಂಡುವಾನೆಯಿಂದ ಬಿಳುಕೊಪ್ಪ ಅರಣ್ಯ ಪ್ರದೇಶಕ್ಕೆ ಹೋಗಿತ್ತು. ಸಕ್ರೇಬೈಲ್ ಕುಮ್ಕಿ ಆನೆಗಳು ಪುಂಡಾನೆಗೆ ಹಗ್ಗ ಹಾಕಿ ಸೆರೆಹಿಡಿದವು.
ಕಾಡಾನೆ ಇಬ್ಬರನ್ನು ಬಲಿ ಪಡೆದ ಹಿನ್ನೆಲೆ ಸರ್ವಪಕ್ಷ, ಸರ್ವ ಸಂಘಟನೆಗಳಿಂದ ಅರಣ್ಯ ಇಲಾಖೆ–ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಬಿಳುಕೊಪ್ಪ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD