ದೇಶಭಕ್ತರು ಜಾತಿಗಣತಿಯ ಎಕ್ಸ್‌-ರೇ ಯಿಂದ ಭಯಗೊಂಡಿದ್ದಾರೆ: ರಾಹುಲ್ ಗಾಂಧಿ ವ್ಯಂಗ್ಯ - Mahanayaka

ದೇಶಭಕ್ತರು ಜಾತಿಗಣತಿಯ ಎಕ್ಸ್‌-ರೇ ಯಿಂದ ಭಯಗೊಂಡಿದ್ದಾರೆ: ರಾಹುಲ್ ಗಾಂಧಿ ವ್ಯಂಗ್ಯ

24/04/2024


Provided by

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ತಮ್ಮನ್ನು ದೇಶಭಕ್ತರೆಂದು ಕರೆಸಿಕೊಳ್ಳುವವರು ಜಾತಿಗಣತಿಯ ಎಕ್ಸ್‌-ರೇ ಯಿಂದ ಭಯಗೊಂಡಿದ್ದಾರೆ ಎಂದರಲ್ಲದೆ ಜಾತಿಗಣತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್‌, ಅನ್ಯಾಯ ಎದುರಿಸುತ್ತಿರುವ ದೇಶದ ಶೇಕಡಾ 90ರಷ್ಟು ಜನರಿಗೆ ನ್ಯಾಯ ದೊರಕಿಸುವುದು ತಮ್ಮ ಜೀವನದ ಉದ್ದೇಶ ಎಂದು ಹೇಳಿದರು. “ನಮ್ಮ ಸರ್ಕಾರ ರಚಿಸಿದ ತಕ್ಷಣ ಮೊದಲ ಕೆಲಸ ಜಾತಿಗಣತಿ ನಡೆಸುವುದು,” ಎಂದು ಅವರು ಹೇಳಿದರು. ದೊಡ್ಡ ಉದ್ಯಮಿಗಳಿಗೆ ಸಾಲ ಮನ್ನಾದ ಮೂಲಕ ದೊರಕಿರುವ ರೂಪಾಯಿ 16 ಲಕ್ಷ ಕೋಟಿಯ ಒಂದು ಸಣ್ಣ ಭಾಗವನ್ನು ದೇಶದ ಶೇ 90ರಷ್ಟು ಜನತೆಗೆ ಮರಳಿ ನೀಡುವ ಉದ್ದೇಶವನ್ನು ಕಾಂಗ್ರೆಸ್‌ ಪ್ರಣಾಳಿಕೆ ಹೊಂದಿದೆ ಎಂದು ಅವರು ಹೇಳಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ