ಇಂದು ಬರುತ್ತಾ? ನಾಳೆ ಬರುತ್ತಾ?:  ಗ್ಯಾರೆಂಟಿ ಹಣಕ್ಕಾಗಿ ಕಾದು ಸುಸ್ತಾದ ಫಲಾನುಭವಿಗಳು - Mahanayaka

ಇಂದು ಬರುತ್ತಾ? ನಾಳೆ ಬರುತ್ತಾ?:  ಗ್ಯಾರೆಂಟಿ ಹಣಕ್ಕಾಗಿ ಕಾದು ಸುಸ್ತಾದ ಫಲಾನುಭವಿಗಳು

gruha lakshmi yojana
17/02/2025


Provided by

ಬೆಂಗಳೂರು:  ಗ್ಯಾರೆಂಟಿ ಹಣ ಇಂದು ಬರುತ್ತಾ ನಾಳೆ ಬರುತ್ತಾ, ಗ್ಯಾರೆಂಟಿ ಇಲ್ಲ, ಎರಡಲ್ಲ ಮೂರು ತಿಂಗಳಾದರೂ ಇನ್ನೂ ಗ್ಯಾರೆಂಟಿ ಹಣ ಬಂದಿಲ್ಲ. ಹೀಗಾಗಿ ಗ್ಯಾರೆಂಟಿ ಹಣ ಗ್ಯಾರೆಂಟಿಯಾಗಿ ಸಿಗುತ್ತಾ ಎನ್ನುವ ಅನುಮಾನದಲ್ಲಿ ಫಲಾನುಭವಿಗಳಿದ್ದಾರೆ.


Provided by

ಪ್ರತೀ ತಿಂಗಳು ಫಲಾನುಭವಿಗಳ ಖಾತೆಗೆ ಗ್ಯಾರೆಂಟಿ ಹಣ ಹಾಕುತ್ತೇವೆ ಎಂದಿದ್ದ ರಾಜ್ಯ ಸರ್ಕಾರ ಇದೀಗ ವಿಳಂಬ ನೀತಿಯನ್ನ ಅನುಸರಿಸುತ್ತಿದೆ.  ಅತ್ತ ಅನ್ನಭಾಗ್ಯ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಬದಲು ಹಣ ನೀಡುವುದಾಗಿ ಘೋಷಿಸಿದ್ದ ಸರ್ಕಾರ, ಅಧಿಕಾರಿಗಳು ಇದೀಗ ಅಕ್ಕಿಯನ್ನೇ ಕೊಡುತ್ತೇವೆ ಅಂತ ಹೇಳುತ್ತಾ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಗ್ಯಾರೆಂಟಿ ಹಣ ಗ್ಯಾರೆಂಟಿಯಾಗಿ ಕೊಡುತ್ತೇವೆ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಗ್ಯಾರೆಂಟಿ ಹಣ ಬಾರದ ಹಿನ್ನೆಲೆ ಈ ಯೋಜನೆ ನಿಂತು ಹೋಗುತ್ತಾ ಅನ್ನೋ ಆತಂಕದಲ್ಲಿ ಸಾರ್ವಜನಿಕರಿದ್ದಾರೆ. ಜೊತೆಗೆ, ಪ್ರತಿ ತಿಂಗಳು ಹಣ ಖಾತೆಗೆ ಬಂದರೆ ಅದರಿಂದ ಜನರಿಗೆ ಉಪಯೋಗವಾಗಬಹುದು. ಆದರೆ ಈ ರೀತಿಯಾಗಿ ಆಟವಾಡಿಸಿ, ಇಂದು ನಾಳೆ ಎಂದು ಸತಾಯಿಸಿ ನೀಡಿದರೆ ಬಡ ಕುಟುಂಬಗಳಿಗೆ ಅದರಿಂದ ಸಕಾಲಕ್ಕೆ ಉಪಯೋಗ ಸಿಗಲು ಸಾಧ್ಯವೇ? ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿದೆ.


Provided by

ಸದ್ಯ ಗ್ಯಾರೆಂಟಿ ಹಣ ಬೇಗನೇ ಖಾತೆಗಳಿಗೆ ಹಾಕಿ ಅಂತ  ಗೃಹಲಕ್ಷ್ಮೀಯರು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕೂಡ ಶೀಘ್ರವೇ ಹಣ ಖಾತೆಗೆ ವರ್ಗಾಯಿಸುವುದಾಗಿ ಭರವಸೆ ನೀಡಿದೆ. ಹಣ ಯಾವಾಗ ಬರುತ್ತೋ ಎಂದು ಫಲಾನುಭವಿಗಳು ಕಾಯುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ