ನೆಲ, ವಾಯು, ಸಮುದ್ರದ ಮೂಲಕ ದಾಳಿ ನಡೆಸಿ ಗಾಝಾ ವಶಪಡಿಸಿಕೊಳ್ಳಲು ಇಸ್ರೇಲ್ ಟಾರ್ಗೆಟ್: ಹಮಾಸ್ ಅನ್ನು ಸೋಲಿಸಲು ಇಸ್ರೇಲಿ ಸೇನೆ ಹೊಂಚು..! - Mahanayaka

ನೆಲ, ವಾಯು, ಸಮುದ್ರದ ಮೂಲಕ ದಾಳಿ ನಡೆಸಿ ಗಾಝಾ ವಶಪಡಿಸಿಕೊಳ್ಳಲು ಇಸ್ರೇಲ್ ಟಾರ್ಗೆಟ್: ಹಮಾಸ್ ಅನ್ನು ಸೋಲಿಸಲು ಇಸ್ರೇಲಿ ಸೇನೆ ಹೊಂಚು..!

15/10/2023


Provided by

ನೆಲ, ವಾಯು ಮತ್ತು ಸಮುದ್ರದ ಮೂಲಕ ಗಾಝಾ ಮೇಲೆ ‘ಸಂಘಟಿತ’ ದಾಳಿ ನಡೆಸಲು ಸಿದ್ಧ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ. ಗಾಝಾ ಗಡಿಯುದ್ದಕ್ಕೂ ಸೇನೆಯು ತನ್ನ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಒಟ್ಟುಗೂಡಿಸಿದೆ ಮತ್ತು ಅಂತಿಮ ಕಮಾಂಡ್ ಗಾಗಿ ಕಾಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

ನಮ್ಮ ಯುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸೇನಾಪಡೆಗಳು ಸಿದ್ಧವಾಗಿವೆ ಎಂದು ಐಡಿಎಫ್ ಉನ್ನತ ಅಧಿಕಾರಿ ಜೊನಾಥನ್ ಕಾನ್ರಿಕಸ್ ಹೇಳಿದ್ದಾರೆ. ತನ್ನ ಪಡೆಗಳನ್ನು ದೇಶಾದ್ಯಂತ ನಿಯೋಜಿಸಲಾಗಿದ್ದು, ಯುದ್ಧದ ಮುಂದಿನ ಹಂತಗಳಿಗೆ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲಾಗಿದೆ. “ಗಮನಾರ್ಹ ನೆಲದ ಕಾರ್ಯಾಚರಣೆಗಳಿಗೆ ಒತ್ತು ನೀಡಲಾಗಿದೆ” ಎಂದು ಮಿಲಿಟರಿ ಹೇಳಿಕೆ ತಿಳಿಸಿದೆ.

ನೆಲದ ಮೇಲಿನ ದಾಳಿಯ ಉದ್ದೇಶಗಳು:
ಒಂದು ವಾರದ ಹಿಂದೆ ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ಗಾಝಾದಲ್ಲಿನ ಹಮಾಸ್ ನ ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕತ್ವವನ್ನು ನಿರ್ಮೂಲನೆ ಮಾಡಲು ಇಸ್ರೇಲ್ ನೆಲದ ದಾಳಿ ಮಾಡಲು ತೀರ್ಮಾನಿಸಿದೆ ಎಂದು ಉನ್ನತ ಮಿಲಿಟರಿ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇಸ್ರೇಲ್ ಸೇನೆಯ ಗುರಿ ಇರುವುದು, ಹಮಾಸ್ ಅನ್ನು ಸೋಲಿಸುವುದು ಹಾಗೂ ಅದರ ನಾಯಕರನ್ನು ನಿರ್ಮೂಲನೆ ಮಾಡುವುದು. ಈ ಸಂಘಟನೆ (ಹಮಾಸ್) ಗಾಝಾವನ್ನು ಮಿಲಿಟರಿ ಮತ್ತು ರಾಜಕೀಯವಾಗಿ ಆಳುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯ ವಕ್ತಾರ ಡೇನಿಯಲ್ ಹಗರಿ ನ್ಯೂಯಾರ್ಕ್ ಟೈಂಸ್ ಗೆ ತಿಳಿಸಿದ್ದಾರೆ.

ಗಾಜಾ ನಗರವು ಹಮಾಸ್ ನ ಭದ್ರಕೋಟೆಯಾಗಿದೆ. ಇಲ್ಲಿನ ಇಸ್ರೇಲ್‌ನ ನೆಲದ ಮೇಲಿನ ಆಕ್ರಮಣ ಯೋಜನೆಯ ವ್ಯಾಪ್ತಿ ಇನ್ನೂ ತಿಳಿದಿಲ್ಲ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇಸ್ರೇಲ್ ಸೇನಾ ನಾಯಕತ್ವವು ನೆಲದ ದಾಳಿಯ ಸಮಯವನ್ನು ಅಧಿಕೃತವಾಗಿ ಘೋಷಿಸಿಲ್ಲ. ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಈ ವಾರ ನೆಲದ ದಾಳಿಯನ್ನು ಪ್ರಾರಂಭಿಸಲಾಗುವುದು ಎಂದಿದೆ.

ಇತ್ತೀಚಿನ ಸುದ್ದಿ