ಮಹಿಳೆಗೆ ಹಲ್ಲೆ ನಡೆಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ: 13 ಮಂದಿ ಅರೆಸ್ಟ್ - Mahanayaka
11:06 AM Saturday 23 - August 2025

ಮಹಿಳೆಗೆ ಹಲ್ಲೆ ನಡೆಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ: 13 ಮಂದಿ ಅರೆಸ್ಟ್

arrested
15/10/2023


Provided by

ಬೆಳಗಾವಿ: ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ. ಚಪ್ಪಲಿ ಹಾರ ಕೊರಳಿಗೆ ಹಾಕಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾನುವಾರ 13 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಮೃತ್ಯುಂಜಯ ಸರ್ಕಲ್ ನಲ್ಲಿ ದುಷ್ಕರ್ಮಿಗಳು  ಹನಿಟ್ರ್ಯಾಪ್ ನ ಆರೋಪ ಹೊರಿಸಿ ಮಹಿಳೆಯೊಬ್ಬರನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಅಧಿಕ ಮಂದಿಯ ವಿರುದ್ಧ ದೂರು ದಾಖಲಾಗಿತ್ತು.

ಸದ್ಯ ಅರ್ಜುನ ಗಂಡವ್ವಗೋಳ, ಲಕ್ಷ್ಮೀ ಮಸ್ಕಿ, ಶೋಭಾ ಮಾಳಗಿ, ಮಾರ್ಕಂಡೇಶ್ವರ ಮಹಿಮಗೋಳ, ರಾಘವೇಂದ್ರ ಚಿಂಚಳಿ, ಸರಸ್ವತಿ ಕೊಳಿ, ಸಾವಿತ್ರಿ ಪೂಜರಿ, ಕಮಲವ್ವ ಬಜಂತ್ರಿ, ಮಾರುತಿ ದೊಡ್ಡಮನಿ, ಉದಯ ಗಂಡವ್ವಗೋಳ, ಕೃಷ್ಣಾ ಗಂಡವ್ವಗೋಳ, ಸುಧೀರ ಜೋಡಟ್ಟಿ, ಶಾಲವ್ವ ದೊಡಮನಿ ಎಂಬವರನ್ನು ಬಂಧಿಸಲಾಗಿದೆ.

ಸಂತ್ರಸ್ತ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ನೀಡಿದ ದೂರಿನನ್ವಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿ