ವಾಟ್ಸಾಪ್ ಸ್ನೇಹಿತನಿಂದ ಮಹಿಳೆಯ ಬರ್ಬರ ಹತ್ಯೆ! - Mahanayaka

ವಾಟ್ಸಾಪ್ ಸ್ನೇಹಿತನಿಂದ ಮಹಿಳೆಯ ಬರ್ಬರ ಹತ್ಯೆ!

WhatsApp friend
07/12/2024

ಚಿಕ್ಕಮಗಳೂರು: 25ರ ಗೃಹಿಣಿಯನ್ನು ಆಕೆಯ ಸ್ನೇಹಿತ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.
ಕಿಚ್ಚಬ್ಬಿ ಗ್ರಾಮದ ತೃಪ್ತಿ (25) ಹತ್ಯೆಗೀಡಾದ ಮಹಿಳೆಯಾಗಿದ್ದಾಳೆ. ಈಕೆಗೆ ವಾಟ್ಸಾಪ್ ಮೂಲಕ ಪರಿಚಯಸ್ಥ ಎನ್ನಲಾಗಿರುವ ಚಿರಂಜೀವಿ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.

ವಾಟ್ಸಾಪ್ ನಲ್ಲಿ ತೃಪ್ತಿಗೆ ಸ್ನೇಹಿತನಾಗಿದ್ದ ಚಿರಂಜೀವಿ ಜೊತೆ ತಿಂಗಳ ಹಿಂದೆ ತೃಪ್ತಿ ಹೋಗಿದ್ದಳು. ಈ ಹಿನ್ನೆಲೆ ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಾಗಿತ್ತು. ಆ ಬಳಿಕ ಮನೆಯವರ ಜೊತೆಗೆ ರಾಜೀ ಸಂಧಾನದ ನಂತರ ಚಿರಂಜೀವಿ ಜೊತೆಗೆ ಮಾತು—ಸ್ನೇಹವನ್ನು ತೃಪ್ತಿ ಬಿಟ್ಟಿದ್ದಳು ಎನ್ನಲಾಗಿದೆ.


ADS

ತೃಪ್ತಿ ಮಾತನಾಡುವುದನ್ನು ನಿಲ್ಲಿಸಿರುವುದು ಚಿರಂಜೀವಿಯನ್ನು ಕೆರಳಿಸಿತ್ತು. ಇಂದು ತೃಪ್ತಿಯ ಗಂಡ ಕೆಲಸಕ್ಕೆ ತೆರಳಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಚಿರಂಜೀವಿ ಮಕ್ಕಳ ಎದುರೇ ತೃಪ್ತಿಗೆ ಚಾಕಿವಿನಿಂದ ಇರಿದಿದ್ದಾನೆ. ಬಳಿಕ ಮನೆಯ ಹಿಂದಿನ ಕೆರೆಗೆ ಎಸೆದಿದ್ದಾನೆ. ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ