ಪ್ರೇಯಸಿ ಸಾವಿನ ಚಿಂತೆಯಲ್ಲಿ ಯುವಕ ನೇಣಿಗೆ ಶರಣು

20/08/2023
ಬ್ರಹ್ಮಾವರ: ಪ್ರೇಯಸ್ಸಿ ಮೃತಪಟ್ಟ ಚಿಂತೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನೀಲಾವರ ಗ್ರಾಮದ ಬಾವಲಿಕುದ್ರು ಎಂಬಲ್ಲಿ ನಡೆದಿದೆ.
ಬಾವಲಿಕುದ್ರುವಿನ ಸುನೀತ ಡಿಸೋಜ ಎಂಬವರ ಮಗ ಸುಜಿತ್ ಡೇವಿಡ್ ಡಿಸೋಜ(21) ಮೃತ ದುದೈರ್ವಿ. ಸಂತೆಕಟ್ಟೆ ಮಿಲಾಗ್ರಿಸ್ ಕಾಲೇಜಿನಲ್ಲಿ 2ನೇ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ ಇವರು, ಕೆಲ ದಿನಗಳ ಹಿಂದೆ ತಾನು ಪ್ರೀತಿಸುತ್ತಿದ್ದ ಹುಡುಗಿ ಮೃತಪಟ್ಟ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಮನೆಯ ಹಾಲ್ನ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ