ಪ್ರಾಧ್ಯಾಪಕರಾಗಿದ್ದ ರವಿಬೆಳಗೆರೆ ಪತ್ರಕರ್ತರಾದರು | ಬೆಳಗೆರೆ ಕುರಿತು ಒಂದಿಷ್ಟು ವಿಚಾರ - Mahanayaka
10:06 AM Sunday 15 - September 2024

ಪ್ರಾಧ್ಯಾಪಕರಾಗಿದ್ದ ರವಿಬೆಳಗೆರೆ ಪತ್ರಕರ್ತರಾದರು | ಬೆಳಗೆರೆ ಕುರಿತು ಒಂದಿಷ್ಟು ವಿಚಾರ

13/11/2020

ಬೆಂಗಳೂರು: ಹಿರಿಯ ಪತ್ರಕರ್ತ ರವಿಬೆಳಗೆರೆ ನಿಧನರಾಗಿದ್ದಾರೆ. 1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಆ ಬಳಿಕ ಬೆಂಗಳೂರಿನ ರಾಜಾಜನಗರದಲ್ಲಿದ್ದ ‘ಅಭಿಮಾನ’ ಪತ್ರಿಕೆಗೆ ಅವರು ಸೇರ್ಪಡೆಗೊಳ್ಳುತ್ತಾರೆ.

ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಅವರು ಕೆಲಸ ಆರಂಭಿಸುತ್ತಾರೆ. ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ಹಲವಾರು ಪುಸ್ತಕಗಳನ್ನು ಬರೆದಿರುವುದು ಮಾತ್ರವಲ್ಲದೇ ಹಲವಾರು ಪುಸ್ತಕಗಳನ್ನು ಕನ್ನಡಕ್ಕೆ ಅವರು ಅನುವಾದವೂ ಮಾಡಿದ್ದಾರೆ. ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.


Provided by

ರವಿ ಬೆಳಗೆರೆ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಾಗ ಅದು ರಾಜ್ ಕುಮಾರ್ ರಸ್ತೆಯಲ್ಲಿ ಇದ್ದರು. ಬದುಕು ಕಟ್ಟಿಕೊಳ್ಳಲು ಶುರುಮಾಡಿದ ರವಿ ಬೆಳೆಗೆರೆ ಅವರು ಮೊದಲು ಸೇರಿದ್ದು ಅಭಿಮಾನ ಪತ್ರಿಕೆಗೆ. ಇಲ್ಲಿ ಅವರು ತಮ್ಮ ವೃತ್ತಿ ನೈಪುಣ್ಯತೆಯನ್ನು ಪ್ರದರ್ಶಿಸಿ ಮುಂದೆ ಅವರು ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆಯನ್ನು ಶುರುಮಾಡಿ ಪತ್ರಿಕಾ ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದರು.

ಇತ್ತೀಚಿನ ಸುದ್ದಿ