ಬೆಳ್ತಂಗಡಿ: ಯಕ್ಷಗಾನ ಬಯಲಾಟದ ಬ್ಯಾನರ್ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು
ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ದುಷ್ಕರ್ಮಿಗಳ ಗುಂಪೊಂದು ವಿಕೃತಿ ಮೆರೆದಿದೆ.
ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಬುಧವಾರದಂದು ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಅನೇಕ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಆದರೆ ಏಕ ಏಕಿ ನಿನ್ನೆ ರಾತ್ರಿ ಬ್ಯಾನರ್ ನ್ನು ಹರಿದು ಕಿತ್ತೆಸೆದು ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ.
ಪೊಸರಡ್ಕ ವಠಾರ ದಲ್ಲೂ ಗರಡಿಯಿದ್ದು ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು.
ಆದರೆ ಇದನ್ನ ಸಹಿಸಿದ ಕೆಲವೊಂದು ಕಿಡಿಗೇಡಿಗಳ ಗುಂಪು ಬ್ಯಾನರ್ ತೆರವುಗೊಳಿಸುವ ಮುನ್ನವೇ.. ಅದನ್ನು ಹರಿದು ಕ್ಷೇತ್ರಕ್ಕೆ ಅಪಮಾನವೆಸಗಿದ್ದಾರೆ.
ಈ ವಿಕೃತಿ ಮೆರೆದವರು ಯಾರೇ ಇದ್ದರು ತಪ್ಪೊಪ್ಪಿಕೊಳ್ಳದೆ ಹೋದರೆ ದೈವಗಳ ಮೊರೆ ಹೋಗುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka