ಪ್ರಧಾನಿ ಮೋದಿಯನ್ನು ಭೇಟಿಯಾದ ತಾರೆಯರಾದ ಯಾಮಿ ಗೌತಮ್, ವಿಜಯ್ ದೇವರಕೊಂಡ, ಅಮಿತ್ ಸಾದ್: ಭೇಟಿ ಕುತೂಹಲ - Mahanayaka

ಪ್ರಧಾನಿ ಮೋದಿಯನ್ನು ಭೇಟಿಯಾದ ತಾರೆಯರಾದ ಯಾಮಿ ಗೌತಮ್, ವಿಜಯ್ ದೇವರಕೊಂಡ, ಅಮಿತ್ ಸಾದ್: ಭೇಟಿ ಕುತೂಹಲ

29/03/2025


Provided by

ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ, ಬಾಲಿವುಡ್ ನಟರಾದ ಯಾಮಿ ಗೌತಮ್ ಮತ್ತು ಅಮಿತ್ ಸಾದ್ ಅವರು ಶುಕ್ರವಾರ ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಟಿವಿ 9 ಶೃಂಗಸಭೆಯಲ್ಲಿ ಭಾಗವಹಿಸಿದ ನರೇಂದ್ರ ಮೋದಿ ಅವರು ಭಾರತೀಯ ಚಲನಚಿತ್ರೋದ್ಯಮದ ನಟರನ್ನು ಭೇಟಿಯಾದರು. ಸೆಲೆಬ್ರಿಟಿಗಳು ತಮ್ಮ ಜೀವನದ ಮರೆಯಲಾಗದ ಕ್ಷಣವನ್ನು ಸೆರೆಹಿಡಿಯಲು ಪ್ರಧಾನಿಯೊಂದಿಗೆ ಫೋಟೋ ತೆಗೆಸಿಕೊಂಡರು.

ಈ ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಹಸಿರು ಬಂದ್ಗಲಾ ಶೆರ್ವಾನಿ ಧರಿಸಿದ್ದರೆ, ಅಮಿತ್ ಸಾಧ್ ಖಾಕಿ ಬ್ಲೇಜರ್ ಮತ್ತು ಪ್ಯಾಂಟ್ ಧರಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಯಾಮಿ ಗೌತಮ್ ನೇರಳೆ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ