ಯಾರಾಗಲಿದ್ದಾರೆ ಪಾಕಿಸ್ತಾನದ ನೂತನ ಪ್ರಧಾನಿ? - Mahanayaka
6:25 AM Tuesday 9 - September 2025

ಯಾರಾಗಲಿದ್ದಾರೆ ಪಾಕಿಸ್ತಾನದ ನೂತನ ಪ್ರಧಾನಿ?

pakisthan
11/04/2022

ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಇಂದು ಸಭೆ ಸೇರಲಿದೆ.  13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ವಿಧಾನಸಭೆ ಕಲಾಪಗಳ ಬಳಿಕ ಶನಿವಾರ ಮಧ್ಯರಾತ್ರಿಯ ನಂತರ ವಿರೋಧ ಪಕ್ಷಗಳು  ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಸರ್ಕಾರವನ್ನು ಪದಚ್ಯುತಗೊಳಿಸಿತು.  ಇದೇ ವೇಳೆ ಇಮ್ರಾನ್ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.


Provided by

ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ರಾಷ್ಟ್ರೀಯ ಅಸೆಂಬ್ಲಿ ಸಭೆ ಸೇರುತ್ತಿದ್ದಂತೆ ಇಮ್ರಾನ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಕರಾಚಿ, ಪೇಶಾವರ ಮತ್ತು ಲಾಹೋರ್ ಸೇರಿದಂತೆ 12 ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.  ಎಲ್ಲಾ ಪಕ್ಷದ ಸಂಸದರು ರಾಜೀನಾಮೆ ನೀಡುವಂತೆ ಖಾನ್ ಒತ್ತಾಯಿಸಿದ್ದಾರೆ.   ಇಮ್ರಾನ್ ಖಾನ್ ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಹೋರಾಟ ಮತ್ತೆ ಆರಂಭವಾಗುತ್ತಿದೆ ಎಂದಿದ್ದಾರೆ.

ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶಹಬಾಜ್ ಷರೀಫ್ (70) ಅವರು ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿದ್ದಾರೆ.  ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಕೂಡ ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕ್ – ಇ – ಇನ್ಸಾಫ್ (ಪಿಟಿಐ) ಗೆ ನಾಮಪತ್ರ ಸಲ್ಲಿಸಿದ್ದಾರೆ.  ರಾಷ್ಟ್ರೀಯ ಅಸೆಂಬ್ಲಿಗೆ ಬೆಳಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದೆ.

ಪಾಕಿಸ್ತಾನದ ಇತಿಹಾಸದಲ್ಲಿ ಅವಿಶ್ವಾಸ ಮತದ ಮೂಲಕ ಪದಚ್ಯುತಗೊಂಡ ಮೊದಲ ಪ್ರಧಾನಿ ಇಮ್ರಾನ್.  ಇಮ್ರಾನ್ ಖಾನ್ ಅವರು ಆಗಸ್ಟ್ 18, 2018 ರಂದು ಅಧಿಕಾರಕ್ಕೆ ಬಂದರು.  ಮೂರು ವರ್ಷ ಏಳು ತಿಂಗಳು ಅಧಿಕಾರದಲ್ಲಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಮನವಮಿ ಆಚರಿಸಿದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಮೊಬೈಲ್ ಗೇಮ್ ಆಡಿ ಮಾನಸಿಕ ರೋಗಿಯಾದ ವಿದ್ಯಾರ್ಥಿ: ಪ್ರಜ್ಞೆ ತಪ್ಪಿದರೂ ನಿಲ್ಲದ ಗೇಮ್

ಮುಸ್ಲಿಮ್ ವ್ಯಾಪಾರಿಯ ಮೇಲೆ ದಾಳಿ ಪ್ರಕರಣ: ಓರ್ವ ಕಿಡಿಗೇಡಿಯ ಬಂಧನ

ಇಂಧನ ಬೆಲೆ ಏರಿಕೆ: ವಿಮಾನದಲ್ಲಿ ಸ್ಮೃತಿ ಇರಾನಿ, ಕಾಂಗ್ರೆಸ್ ನಾಯಕ ನಡುವೆ ಜಟಾಪಟಿ

ತಂದೆ ತಾಯಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಂದ ಪಾಪಿ ಪುತ್ರ!

ಇತ್ತೀಚಿನ ಸುದ್ದಿ