ಪುಷ್ಪ 2 ಸಿನಿಮಾ ನೋಡಲು ಬರುತ್ತಿದ್ದ ಭರದಲ್ಲಿ ರೈಲುಗಳ ನಡುವೆ ಸಿಲುಕಿ ಯುವಕ ಸಾವು!
ಬೆಂಗಳೂರು: ಪುಷ್ಪ 2 ಸಿನಿಮಾ ನೋಡಲು ಬರುತ್ತಿದ್ದ ಭರದಲ್ಲಿ ಯುವಕನೊಬ್ಬ ಎಕ್ಸ್ ಪ್ರೆಸ್ ರೈಲುಗಳ ನಡುವೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಆಂಧ್ರದ ಶ್ರೀಕಾಕುಳಂ ಮೂಲದ ಪ್ರವೀಣ್(19) ಸಾವನ್ನಪ್ಪಿದ ಯುವಕನಾಗಿದ್ದಾನೆ. ಈತ ಐಟಿಐ ಮುಗಿಸಿ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ.
ಇಂದು ಬೆಳಗ್ಗೆ ಸ್ನೇಹಿತರೊಂದಿಗೆ ಪುಷ್ಪ 2 ಚಿತ್ರ ನೋಡಲೆಂದು ಬರುತ್ತಿದ್ದ ಭರದಲ್ಲಿ ಗೂಡ್ಸ್ ಮತ್ತು ಗೋರಕ್ ಪುರ ಎಕ್ಸ್ ಪ್ರೆಸ್ ರೈಲುಗಳ ನಡುವೆ ಸಿಲುಕಿ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಶವಂತಪುರ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: