ಸ್ನೇಹಿತೆಯ ಮನೆಯಲ್ಲಿ ಸಾವಿಗೆ ಶರಣಾದ ಯುವಕ! - Mahanayaka

ಸ್ನೇಹಿತೆಯ ಮನೆಯಲ್ಲಿ ಸಾವಿಗೆ ಶರಣಾದ ಯುವಕ!

madan
02/10/2024


Provided by

ಬೆಂಗಳೂರು: ಯುವಕನೊಬ್ಬ ತನ್ನ ಸ್ನೇಹಿತೆಯ ಮನೆಯಲ್ಲೇ ಸಾವಿಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಣನಕುಂಟೆಯ ಪಿಳ್ಳಗಾನಹಳ್ಳಿಯ ನಿವಾಸಿ ಮದನ್ (24) ಸಾವಿಗೆ ಶರಣಾದ ಯುವಕನಾಗಿದ್ದಾನೆ.

ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಮಂಡಿ ಲೇ ಔಟ್‌ನಲ್ಲಿ ಸಾಗರ ಮೂಲದ ಕಿರುತೆರೆ ಸಹನಟಿ ವೀಣಾ ಎಂಬುವರು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ವೀಣಾಗೆ ಪುನೀತ್ ಹಾಗೂ ಮಾಧವ್ ಸ್ನೇಹಿತರು. ಮೊದಲು ಪುನೀತ್ ಜೊತೆ ವೀಣಾ ಆತೀಯರಾಗಿದ್ದರು. ನಂತರದ ದಿನಗಳಲ್ಲಿ ಪುನೀತ್ ಆಕೆಯಿಂದ ಅಂತರ ಕಾಯ್ದುಕೊಂಡು ದೂರವಾಗಿದ್ದಾನೆ. ವೀಣಾ ಮನೆಗೆ ಮದನ್ ಆಗಾಗ್ಗೆ ಬಂದು ಹೋಗುತ್ತಿದ್ದ. ತದನಂತರದಲ್ಲಿ ಇವರಿಬ್ಬರ ಮಧ್ಯೆ ಸಲುಗೆ ಬೆಳೆದು ಲಿವಿಂಗ್ ಟುಗೆದರ್‌ನಲ್ಲಿದ್ದರು ಎಂದು ಹೇಳಲಾಗಿದೆ.

ನಿನ್ನೆ ವೀಣಾ ಮನೆಗೆ ಮದನ್ ಬಂದಿದ್ದಾನೆ. ಆ ವೇಳೆ ಇವರಿಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಮಾತಿನ ವಾಗ್ವಾದವಾಗಿದೆ. ನಂತರ ಇವರಿಬ್ಬರೂ ಸೇರಿ ರಾತ್ರಿ 7 ಬಾಟಲಿ ಬ್ರೀಜರ್ ಸೇವಿಸಿದ್ದರು. ಇದಾದ ನಂತೆ ವೀಣಾ ರೂಮಿಗೆ ಹೋದಾಗ ಮದನ್ ಬೇರೆ ರೂಮಿಗೆ ಹೋಗಿ ರಾತ್ರಿ 8:30ರ ಸುಮಾರಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ತಕ್ಷಣ ವೀಣಾ ಮದನ್ ತಾಯಿಗೆ ವಿಷಯ ತಿಳಿಸಿದ್ದಾರೆ. ಮದನ್ ಕುಟುಂಬಸ್ಥರು ಈಕೆ ಮನೆ ಬಳಿ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಘಟನೆ ಸಂಬಂಧ ಮದನ್ ತಾಯಿ ಹುಳಿಮಾವು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗನ ಸಾವಿಗೆ ವೀಣಾ ಕಾರಣ. ನನ್ನ ಮಗನಿಗೆ ಇಷ್ಟವಿಲ್ಲದಿದ್ದರೂ ಮದುವೆ ಯಾಗುವಂತೆ ಒತ್ತಾಯಿಸುತ್ತಿದ್ದುದರಿಂದ ಮಗ ಸಾವಿಗೆ ಶರಣಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ಹುಳಿಮಾವು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ