ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ!
ಬೆಂಗಳೂರು: ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಗೆ ಆಟೋ ಚಾಲಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಆಟೋ ಚಾಲಕ ನಿಗದಿತ ಮಿತಿಗಿಂತ ಹೆಚ್ಚು ಹಣವನ್ನು ಕೇಳಿದ್ದಾನೆ. ಈ ವೇಳೆ ಯುವತಿ 150 ರೂಪಾಯಿ ಕೊಡುವುದಾಗಿ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಯುವತಿ ಎಂದೂ ನೋಡದೇ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಸಿಲ್ಕ್ ಬೋರ್ಡ್ ಇಲ್ಲೇ ಇದ್ಯಾ ಎಂದು ಯುವತಿಯನ್ನು ಆಟೋ ಚಾಲಕ ಛೇಡಿಸಿದ್ದಾನೆ. ಆಟೋ ಚಾಲಕನ ವರ್ತನೆಯನ್ನು ಯುವತಿ ವಿಡಿಯೋ ಮಾಡಿಕೊಂಡು ನಗರ ಪೊಲೀಸರಿಗೆ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ನಗರ ಪೊಲೀಸರು ಯುವತಿ ಹಾಕಿರುವ ಪೋಸ್ಟ್ ಗಮನಿಸಿ ಘಟನೆ ನಡೆದ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡುವಂತೆ ಕೇಳಿದ್ದಾರೆ.
ಆಟೋ ಚಾಲಕರು ಈ ರೀತಿಯಾಗಿ ವರ್ತಿಸಿದರೆ, ಮಹಿಳೆಯರು ಹೇಗೆ ಆಟೋದಲ್ಲಿ ಪ್ರಯಾಣಿಸುವುದು ಎನ್ನುವ ಪ್ರಶ್ನೆ ಎದುರಾಗಿದೆ. ಸೆ.2ರಂದು ಮಾಗಡಿ ರಸ್ತೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ ಯುವತಿಗೆ ನಿಂದಿಸಿದ್ದ ಘಟನೆಯೂ ನಡೆದಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: