ಕೆಲಸ ಸಿಗದೇ ನೊಂದ ತನಗೆ ತಾನೇ ಶ್ರದ್ಧಾಂಜಲಿ ಅರ್ಪಿಸಿದ ಯುವಕ!

ಬೆಂಗಳೂರು: ಕೆಲಸ ಸಿಗದೇ ನೊಂದ ಯುವಕನೊಬ್ಬ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ವಿಚಿತ್ರ ಪೋಸ್ಟ್ ಮಾಡಿರುವ ಘಟನೆ ನಡೆದಿದ್ದು, ಈ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಪ್ರಶಾಂತ್ ಹರಿದಾಸ್ ಎಂಬ ಯುವಕ ಕಳೆದ ಮೂರು ವರ್ಷಗಳಿಂದ ಕೆಲಸ ಸಿಗದೇ ಅಲೆದಾಡಿದ್ದು, ಇದರಿಂದ ನೊಂದು ಇದೀಗ ಯುವಕ ತನ್ನದೇ ಶ್ರದ್ಧಾಂಜಲಿ ಫೋಸ್ಟ್ ಮಾಡಿಕೊಂಡಿದ್ದು, ಇದರಲ್ಲಿ ಧನ್ಯವಾದಗಳು ಲಿಂಕ್ಡ್ ಇನ್, ಉದ್ಯೋಗದಾತರಿಗೆ ಧನ್ಯವಾದಗಳು. ನನ್ನ ಅರ್ಜಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಾ ನನ್ನ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಫೋಸ್ಟ್ ನಂತರ ಯಾರೂ ನನ್ನನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ನನಗೆ ಚೆನ್ನಾಗಿಯೇ ತಿಳಿದಿದೆ. RIP ಎಂದು ಬರೆದುಕೊಂಡಿದ್ದಾನೆ.
ಕೆಲಸ ಸಿಗುವುದರಲ್ಲಿ ಮಾತ್ರ ಸತ್ತಿದ್ದೇನೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಲ್ಲ. ಜೀವನವನ್ನು ನಾನು ಇಷ್ಟಪಡುತ್ತೇನೆ ಎಂದು ಯುವಕ ಹೇಳಿಕೊಂಡಿದ್ದಾನೆ. ಈ ಪೋಸ್ಟ್ ಗೆ ಸಾಕಷ್ಟು ಜನರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7